ಹೋರಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಾರಸುದಾರರಿಂದ ಠಾಣೆಗೆ ದೂರು



ಮಂಗಳಪದವು: ವ್ಯಕ್ತಿಯೋರ್ವರ ಮನೆಯಲ್ಲಿದ್ದ ರಾಮ ಮತ್ತು ಕೃಷ್ಣ ಎಂಬ (ಸುಮಾರು 1 ವರ್ಷ 3 ತಿಂಗಳು) ಹೋರಿಗಳು ಮೇಯಲು ಬಿಟ್ಟ ನಂತರ ಮಂಗಳಪದವು ಪರಿಸರದಿಂದ 28/8/2025 ರಂದು ಕಾಣೆಯಾಗಿರುವ ಮತ್ತು ಯಾರೋ ಗೋಕಳ್ಳರು ಕದ್ದುಕೊಂಡು ಹೋದ ಅನುಮಾನವಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ಶಿವಾನಂದ ಎಮ್ ಎಂಬವರು ದೂರು ನೀಡಿದ್ದಾರೆ.
ವಿಟ್ಲ ತಿರ್ತಕೆಲಿಂಜ ಮಂಗಳಪದವು ನಿವಾಸಿ ಶಿವಾನಂದ ಎಮ್ ಎಂಬವರ ದೂರಿನಂತೆ “ನನ್ನ ಮನೆಯಲ್ಲಿ ಹಲವು ಗೋವುಗಳಿದ್ದು, ಮಳೆಗಾಲದ ಸಮಯವಾಗಿದ್ದ ಕಾರಣ ಎಂದಿನಂತೆ ಆ.26/8/2025ರಂದು ಮೇಯಲು ಬಿಟ್ಟಿರುತ್ತೇನೆ. ನಂತರ ಚೌತಿಯ ದಿನವಾದ ಆ.27/8/2025ರಂದು ಸಂಜೆ ಮಂಗಳಪದವಿನ ಅಯ್ಯಪ್ಪ ಭಜನಾ ಮಂದಿರದ ಹತ್ತಿರ ಮೇಯುತ್ತಾ ಇದ್ದ ನನ್ನ ಮನೆಯ ಹಲವು ಗೋವುಗಳ ಪೈಕಿ ರಾಮ ಎಂಬ ಕೆಂಪು ಗೀರು ತಳಿಯ 1.3 ವರ್ಷದ ಹೋರಿ ಮತ್ತು ಕೃಷ್ಣ ಎಂಬ ಸಂಪೂರ್ಣ ಕಪ್ಪು ಮೈ ಬಣ್ಣದ ಸಾಯಿವಾಲ್ ಕ್ರಾಸ್ ಹೋರಿ ಮರುದಿವಸ ಅಂದರೆ ತಾರೀಕು 28/8/2025 ರಿಂದ ಎಲ್ಲಿ ಹುಡುಕಿದರು ಸಿಗದೆ ಇದ್ದು ಗೋಮಾತೆಯನ್ನು ಕಡಿದು ತಿನ್ನುವ ರಾಕ್ಷಸರು ನನ್ನ ಮನೆಯ ಕೃಷ್ಣ ಮತ್ತು ರಾಮನನ್ನು ಕದ್ದುಕೊಂಡು ಹೋಗಿರುವ ಬಗ್ಗೆ ಅನುಮಾನವಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ವಿಚಾರದಲ್ಲಿ ಊರಿನಲ್ಲಿ ವ್ಯಾಪರ ಮಾಡುವ ಮತ್ತು ಕಡಿಯುವ ಕೆಲವರ ಬಗ್ಗೆ ನನಗೆ ಅನುಮಾನವಿದ್ದು ಹಾಗೆಯೇ 1 ವರ್ಷದ ಹಿಂದೆ ನಾನು ದನಗಳನ್ನು ಮೇಯಿಸಿಕೊಂಡು ಹೋಗುವಾಗ ಬೋಳಂತೂರಿನ ಉನೈಸ್ ಎಂಬ ವ್ಯಕ್ತಿ ಹಾಗೂ ಇನ್ನೊಬ್ಬರು ನನ್ನಲ್ಲಿ ಹೋರಿ ಕರುವನ್ನು ನಮಗೆ ಕೊಡುತ್ತೀರ ಎಂದು ಕೇಳಿದಾಗ ನಾನು ಗೋವುಗಳನ್ನು ಯಾರಿಗೂ ಕೊಡುವುದಿಲ್ಲ ಎಂದು ಹೇಳಿದ ತಕ್ಷಣ ಅವರು ಬೈಕಿನಲ್ಲಿ ಹೋಗಿರುತ್ತಾರೆ. ನಂತರ ಕೆಲವೊಂದು ವ್ಯಕ್ತಿಗಳ ಬಳಿ ನನ್ನ ಕಾಣೆಯಾದ ರಾಮ ಮತ್ತು ಕೃಷ್ಣ ಎಂಬ ಹೋರಿಗಳ ಬಗ್ಗೆ ತಿಳಿಸಿದಾಗ ಅದೇ ವ್ಯಕ್ತಿಗಳ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿರುತ್ತಾರೆ.
ಆದ್ದರಿಂದ ಕಾಣೆಯಾದ ನನ್ನ ರಾಮ ಎಂಬ ಕೆಂಪು ಗೀರು ತಳಿ ಮತ್ತು ಕೃಷ್ಣ ಎಂಬ ಸಂಪೂರ್ಣ ಕಪ್ಪು ಮೈ ಬಣ್ಣದ ಸಾಯಿವಾಲ್ ಕ್ರಾಸ್ ಹೋರಿಯನ್ನು ಕಾಣೆಯಾಗಿರುವ ಬಗ್ಗೆ ತನಿಖೆ ನಡೆಸಿ ಪತ್ತೆ ಹಚ್ಚಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಶಿವಾನಂದ ಎಮ್‌ರವರು ದೂರಿನಲ್ಲಿ ತಿಳಿಸಿದ್ದಾರೆ.








