- Advertisement -
- Advertisement -





ಯಾದಗಿರಿ : ಮುಗಿಸಿದ ಕಾಮಗಾರಿಗೆ ಬಿಲ್ ಪಾಸ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು, ಫೋನ್‌ಪೇ ಮೂಲಕ ಹಣ ಸ್ವೀಕರಿಸಿದ ಇಬ್ಬರು ಇಂಜಿನಿಯರ್‌ಗಳನ್ನು ಲೋಕಾಯುಕ್ತರು ಬಂಧಿಸಿದ ಘಟನೆ ಗುರುವಾರ ನಡೆದಿದೆ.

ಶಹಾಪುರ ತಾಲೂಕಿನ ಭೀಗುಡಿಯಲ್ಲಿರುವ ಕೆಬಿಜೆಎನ್‌ಎಲ್‌ನ ಎಇಇ ಮಧುಸೂದನ ಹಾಗೂ ಜೆಇ ಮಂಜುನಾಥ ಅವರು 35 ಸಾವಿರ ರೂ. ಲಂಚ ಪಡೆದ ಹಿನ್ನೆಲೆಯಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.ಲಂಚದ ಹಣವನ್ನು ಎಇಇ ಮಧುಸೂದನ ಅವರು ಫೋನ್‌ಪೇ ಮೂಲಕ ಸ್ವೀಕರಿಸಿದ್ದಾಗಿ ತಿಳಿದುಬಂದಿದೆ. ವಡಗೇರಾ ತಾಲೂಕಿನ ಗಡ್ಡೆಸೂಗುರಿನ ಖಾಸಿಂಸಾಬ್ ಜಲಾಲ್ ಸಾಬ್ ನೀಡಿದ ದೂರಿನ ಮೇರೆಗೆ ಲೋಕಾಯುಕ್ತರು ದಾಳಿ ನಡೆಸಿದರು.
ಲೋಕಾಯುಕ್ತ ಎಸ್‌ಪಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಜೆ.ಎಚ್. ಇನಾಂದಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ರೆಡ್‌ಹ್ಯಾಂಡಾಗಿ ಹಿಡಿದಿದ್ದಾರೆ. ಇಬ್ಬರ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
- Advertisement -








