Tuesday, July 21, 2026
spot_imgspot_img
spot_imgspot_img

ಮಂಗಳೂರು: ಬುರ್ಖಾ ಧರಿಸಿ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ಇಮ್ರಾನ್ ಬಂಧನ

- Advertisement -
- Advertisement -

ಮಂಗಳೂರು: ಬುರ್ಖಾ ಧರಿಸಿಕೊಂಡು ಪೊಲೀಸರ ಕಣ್ತಪ್ಪಿಸಿ, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಕುಖ್ಯಾತ ರೌಡಿ ಆಸಾಮಿ ಇಮ್ರಾನ್ @ ಸುರ್ಮೋ ಇಮ್ರಾನ್ ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ಮಂಗಳೂರು ನಗರ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಒಟ್ಟು 23 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಹಲವು ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ಪೊಲೀಸರಿಂದ ತಪ್ಪಿಸಿಕೊಳ್ಳಲು ನಿರಂತರವಾಗಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

ಆರೋಪಿಯ ವಿರುದ್ಧ ಮಂಗಳೂರು ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ.

ಬಂಧಿತ ಆರೋಪಿಯನ್ನು ಅಗತ್ಯ ಕಾನೂನು ಕ್ರಮಗಳಿಗಾಗಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಾರಂಟ್ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಮತ್ತು ಕಾಯ್ದೆಯ ಸೆಕ್ಷನ್‌ಗಳು:

1). ಉಳ್ಳಾಲ ಠಾಣೆ ಅಪರಾಧ ಸಂಖ್ಯೆ 118/2017 ಸೆಕ್ಷನ್ 341, 504, 506, 323, 324, 307 R/w 34 ಐಪಿಸಿ
2) ಉಳ್ಳಾಲ ಠಾಣೆ ಅಪರಾಧ ಸಂಖ್ಯೆ 422/2017 ಸೆಕ್ಷನ್ 341, 323, 506, 324, 307 R/w 34 ಐಪಿಸಿ
3) ಬರ್ಕೆ ಠಾಣೆ ಅಪರಾಧ ಸಂಖ್ಯೆ 05/2018 ಸೆಕ್ಷನ್ 120(ಬಿ), 143, 147, 148, 323, 324, 353, 332, 427 R/w 149
4) ಬರ್ಕೆ ಠಾಣೆ ಅಪರಾಧ ಸಂಖ್ಯೆ 06/2018 ಸೆಕ್ಷನ್ 504, 324, 353, 332 R/w 149 ಐಪಿಸಿ
5) ಮಂಗಳೂರು ಗ್ರಾಮಾಂತರ ಠಾಣೆ ಅಪರಾಧ ಸಂಖ್ಯೆ 100/2019 ಸೆಕ್ಷನ್ 395 ಐಪಿಸಿ

- Advertisement -

Related news

error: Content is protected !!