Tuesday, July 21, 2026
spot_imgspot_img
spot_imgspot_img

*ಕರ್ತವ್ಯಕ್ಕೆ ಅಡ್ಡಿ – ಜಾತಿ ನಿಂದನೆ ಆರೋಪ: ಕಚೇರಿಯಲ್ಲಿ ಕುಸಿದು ಬಿದ್ದ ಮಹಿಳಾ ಸಿಬ್ಬಂದಿ-ನೇರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ ಮತ್ತು ಸಿಬ್ಬಂದಿಗಳ ವಿರುದ್ದ ಪ್ರಕರಣ ದಾಖಲು

- Advertisement -
- Advertisement -

ವಿಟ್ಲ: ಬಂಟ್ವಾಳ ತಾಲೂಕಿನ ನೇರಳಕಟ್ಟೆಯಲ್ಲಿರುವ ಸಹಕಾರ ಸಂಘದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಗೆ ಹಲ್ಲೆ ಹಾಗೂ ಜಾತಿ ನಿಂದನೆ ಮಾಡಿದ ಆರೋಪದಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೂರುದಾರರಾದ ನೆಟ್ಲಮುಡ್ನೂಡು ನಿವಾಸಿ ಸೇಸಮ್ಮ (47) ಅವರು ಪರಿಶಿಷ್ಠ ಜಾತಿಗೆ ಸೇರಿದ್ದಾಗಿ ತಿಳಿದುಬಂದಿದೆ.

ಅವರು ನೇರಳಕಟ್ಟೆಯ ಸಹಕಾರ ಸಂಘದಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ದಿನಾಂಕ 02-04-2026 ರಂದು ಕರ್ತವ್ಯದಲ್ಲಿದ್ದ ವೇಳೆ, ಶಾಖೆಯ ಪ್ರಭಾರ ವ್ಯವಸ್ಥಾಪಕ ಯತೀಶ್ ಡಿ ಗೌಡ ಅವರು ಬಂದು ಕರ್ತವ್ಯ ನಿರ್ವಹಿಸಬಾರದು ಎಂದು ಸೂಚಿಸಿದ್ದು, ಇದಕ್ಕೆ ಸೇಸಮ್ಮ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಆರೋಪಿ ಅವರು ಅವರನ್ನು ಕೈಯಿಂದ ತಳ್ಳಿ ಜಾತಿ ನಿಂದನೆ ಮಾಡಿದರೆಂದು ದೂರಿನಲ್ಲಿ ಆರೋಪಿಸಲಾಗಿದೆ.ನಂತರ ದಿನಾಂಕ 07-04-2026 ರಂದು ಬೆಳಿಗ್ಗೆ ಮತ್ತೆ ಕರ್ತವ್ಯಕ್ಕೆ ಹಾಜರಾದಾಗಲೂ ಅಡ್ಡಿಪಡಿಸಿದ ಪರಿಣಾಮ, ಸೇಸಮ್ಮ ಅವರು ಮನನೊಂದು ಅಸ್ವಸ್ಥಗೊಂಡು ಕಚೇರಿಯಲ್ಲೇ ಕುಸಿದಿದ್ದು, ಸಿಬ್ಬಂದಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಸಂಬಂಧ ಸಂಘದ ಪದಾಧಿಕಾರಿಗಳಾದ ಯಶೋಧ, ಪುಷ್ಪರಾಜ್ ಚೌಟ ಹಾಗೂ ಯತೀಶ್ ಡಿ ಗೌಡ ವಿರುದ್ಧ ಸೇಸಮ್ಮ ಅವರು 11-04-2026 ರಂದು ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರಮ ಸಂಖ್ಯೆ 88/2026 ರಂತೆ ಪ್ರಕರಣ ದಾಖಲಾಗಿದೆ.ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 74, 49 ಹಾಗೂ ಎಸ್‌ಸಿ/ಎಸ್‌ಟಿ (ಅತ್ಯಾಚಾರ ತಡೆ) ತಿದ್ದುಪಡಿ ಕಾಯ್ದೆ 2015ರ ಕಲಂ 3(1)(r)(s), 3(2)(va) ಅಡಿಯಲ್ಲಿ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!