Saturday, April 20, 2024
spot_imgspot_img
spot_imgspot_img

8379.62 ಕೋಟಿ ರೂಪಾಯಿ ಮೌಲ್ಯದ ಆಗ್ರಾ ಮೆಟ್ರೋ ಪ್ರಾಜೆಕ್ಟ್​ಗೆ ಮೋದಿಯಿಂದ ಚಾಲನೆ

- Advertisement -G L Acharya panikkar
- Advertisement -

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 8379.62 ಕೋಟಿ ರೂಪಾಯಿ ಮೌಲ್ಯದ ಆಗ್ರಾ ಮೆಟ್ರೋ ಪ್ರಾಜೆಕ್ಟ್​ಗೆ ಚಾಲನೆ ನೀಡಿದ್ದಾರೆ. ಡಿಸೆಂಬರ್​ 2022ರ ವೇಳೆಗೆ ಕಾಮಗಾರಿಯನ್ನ ಸಂಪೂರ್ಣ ಮುಗಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸುವ ಗುರಿಯನ್ನ ಹೊಂದಲಾಗಿದೆ.ಪ್ರಧಾನಿ ಮೋದಿ ಆಗ್ರಾ ಮೆಟ್ರೋ ಪ್ರೊಜೆಕ್ಟ್​ನ ಫೇಸ್​ 1 ಕ್ಕೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು.. ಆಗ್ರಾ ಯಾವಾಗಲೂ ಬಹಳ ಪ್ರಾಚೀನ ಗುರುತನ್ನು ಹೊಂದಿದೆ. ಈಗ ಆಧುನಿಕತೆಯ ಹೊಸ ಆಯಾಮವನ್ನು ಸೇರಿಸಲಾಗುತ್ತಿದೆ. ನೂರಾರು ವರ್ಷಗಳ ಇತಿಹಾಸವನ್ನು ಸಂರಕ್ಷಿಸಿರುವ ನಗರವು ಈಗ 21ನೇ ಶತಮಾನಕ್ಕೆ ಸೇರಲು ತಯಾರಾಗುತ್ತಿದೆ. ಆಗ್ರಾದಲ್ಲಿ ಸ್ಮಾರ್ಟ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಸುಮಾರು 1,000 ಕೋಟಿ ರೂ.ಗಳ ಯೋಜನೆಗಳು ಈಗಾಗಲೇ ನಡೆಯುತ್ತಿವೆ ಅಂತಾ ಹೇಳಿದರು.

ಅಲ್ಲದೇ ಆಗ್ರಾ ಮೆಟ್ರೋ ರೈಲು ಯೋಜನೆಯಿಂದ ಆಧುನಿಕ ಸೌಲಭ್ಯಗಳ ಲಭ್ಯತೆ ಮತ್ತಷ್ಟು ಹೆಚ್ಚುತ್ತಿದೆ. ಮೀರತ್‌ನಿಂದ ದೆಹಲಿ ನಡುವೆ ದೇಶದ ಮೊದಲ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸಲಾಗುತ್ತಿದೆ ಅಂತಾ ತಿಳಿಸಿದರು. ಎರಡು ಕಾರಿಡಾರ್‌ಗಳನ್ನು ಹೊಂದಿರುವ ಈ ಯೋಜನೆಯು ಪ್ರವಾಸಿಗರಿಗೆ ಸಹಾಯ ಮಾಡುತ್ತದೆ. ಈ ಯೋಜನೆಯ ಮೂಲಕ ಪ್ರವಾಸಿ ತಾಣಗಳಾದ ತಾಜ್‌ಮಹಲ್, ಆಗ್ರಾ ಕೋಟೆ, ಸಿಕಂದ್ರ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ.

- Advertisement -

Related news

error: Content is protected !!