Friday, May 3, 2024
spot_imgspot_img
spot_imgspot_img

ಬ್ರಹ್ಮಾವರ: ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ವಂಚನೆ; ಪ್ರಕರಣ ದಾಖಲು

- Advertisement -G L Acharya panikkar
- Advertisement -

ಬ್ರಹ್ಮಾವರ: ಗೋಡಂಬಿ ಫ್ಯಾಕ್ಟರಿಯೊಂದರಿಂದ ಸೂರತ್‌ ಮತ್ತು ಅಹ್ಮದಾಬಾದ್‌ಗೆ ತಲುಪಬೇಕಾಗಿದ್ದ ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ತಲುಪಿಸದೆ ವಂಚಿಸಲಾಗಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏ. 2ರಂದು ಲಾರಿ ಚಾಲಕನು 1,21,76,598 ರೂ. ಮೌಲ್ಯದ 24.69 ಮೆಟ್ರಿಕ್‌ ಟನ್‌ ಗೋಡಂಬಿ ತುಂಬಿಸಿ ಸೂರತ್‌ ಮತ್ತು ಅಹ್ಮದಾಬಾದ್‌ ಕಡೆಗೆ ಹೊರಟಿದ್ದನು. ಈ ಲಾರಿಯು ಏ. 5ರಂದು ತಲುಪಬೇಕಾಗಿದ್ದ ಸ್ಥಳಕ್ಕೆ ತಲುಪದೇ ಇದ್ದು, ಬಳಿಕ ಚಾಲಕನ ಫೋನ್‌ ಸ್ವಿಚ್‌ ಆಫ್‌ ಆಗಿದೆ. ಈ ಬಗ್ಗೆ ಫ್ಯಾಕ್ಟರಿ ಮಾಲಕ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!