ಮಾಜಿ ಪಂಚಾಯತ್ ಸದಸ್ಯನ ಬಣ್ಣದ ಮಾತಿಗೆ ಮರುಳಾಗಿ ಅತೀ ಆಸೆಯಿಂದ ಲಕ್ಷ ಲಕ್ಷ ಹಣ ಹಾಕಿದ ವಿಟ್ಲದ ಅತೀ ಬುದ್ಧಿವಂತರು..!


ಇತ್ತೀಚಿನ ದಿನಗಳಲ್ಲಿ ಬಿಟ್ಕಾಯಿನ್ ಸಾಕಷ್ಟು ಸೌಂಡ್ ಮಾಡ್ತಿದೆ. ಭಾರತೀಯರು ಡಿಜಿಟಲ್ ಕರೆನ್ಸಿ ಬಿಟ್ ಕಾಯಿನ್ಗಳಲ್ಲಿ ಹಣ ಹೂಡಿಕೆ ಮಾಡುತ್ತಿರುವ ಪ್ರಮಾಣ ಹೆಚ್ಚಾಗಿರುವ ಸಮಯದಲ್ಲಿಯೇ ಬಿಟ್ಕಾಯಿನ್ ದಂಧೆ ಕೂಡ ಹೊಸ ಸ್ವರೂಪ ಪಡೆದುಕೊಂಡಿದೆ.
ವಿಟ್ಲ ಪರಿಸರದ ಸುತ್ತಮುತ್ತ ಪರಿಸರದಲ್ಲಿ ಕ್ರಿಪ್ಟೋಕರೆನ್ಸಿ, ಬಿಟ್ ಕಾಯಿನ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಬುದ್ಧಿವಂತರ ಜಿಲ್ಲೇ ಎಂದೇ ಖ್ಯಾತಿ ಪಡೆದ ಕರಾವಳಿಯಲ್ಲಿ ಪ್ಟೋಕರೆನ್ಸಿ, ಬಿಟ್ ಕಾಯಿನ್ ದಂಧೆಗೆ ಲಕ್ಷಾಂತರ ಹಣಹಾಕಿ ಮೋಸ ಹೋದವರೇ ಹೆಚ್ಚು ಮಹಾಬುದ್ಧಿವಂತರು. ಅದರಲ್ಲೂ ವಿಟ್ಲ ಪರಿಸರದಲ್ಲಿ ಮಾಜಿ ಪಂಚಾಯತ್ ಸದಸ್ಯನ ಬಣ್ಣದ ಮಾತಿಗೆ ಮರುಳಾಗಿ ಅತೀ ಆಸೆಯಿಂದ ಲಕ್ಷ ಲಕ್ಷ ಹಣ ಹಾಕಿ ಮೋಸಹೋದ ವಿಟ್ಲದ ಅತೀ ಬುದ್ಧಿವಂತರು.
ಡಬ್ಬಲ್ ಕನಸು ಕಂಡು ಬಿಟ್ ಕಾಯಿನ್ ದಂಧೆಗೆ ಲಕ್ಷ ಲಕ್ಷ ತೊಡಗಿಸಿ ಬಕ ಪಕ್ಷಿಯಂತೆ ಕಾದು ಕುಳಿತ ಜನರಿಗೆ ಕೊನೆಗೆ ದೊರಕಿದ್ದು ಖಾಲಿ ಜೇಬು. ಲಕ್ಷ ಲಕ್ಷ ತೊಡಗಿಸಿ ಕೈ ಸುಟ್ಟುಕೊಂಡು ಯಾರಲ್ಲೂ ಹೇಳಲಾಗದೇ ಮನದೊಳಗೆ ನರಳುತ್ತಿರುವ ಪರಿಸ್ಥಿತಿ ಈ ದಂಧೆಯಲ್ಲಿ ಸಿಲುಕಿರುವ ಜನರಿಗೆ ಎದುರಾಗಿದೆ. ಈ ಹಿಂದೆಯೇ ಬಿಟ್ ಕಾಯಿನ್ ಕಾನೂನು ಬಾಹಿರ ಅಭದ್ರತೆ ವ್ಯವಹಾರ ಎಂದು ಕೇಂದ್ರ ಸರ್ಕಾರ ಘೋಷಸಿತ್ತು. .ಆದರೆ ಇತ್ತೀಚಿನ ದಿನಗಳಲ್ಲಿ ಈ ದಂಧೆ ಅಲ್ಲಲ್ಲಿ ಕಾಣುತ್ತಿದ್ದು, ಜನರ ಬದುಕನ್ನೇ ಕಿತ್ತುಕೊಂಡಿದೆ. ಸಮಾಜಘಾತುಕರು, ಡ್ರಗ್ಸ್ ಪೆಡ್ಲರುಗಳಿಗೆ ಗುಪ್ತವಾಗಿ ಹಣ ವರ್ಗಾವಣೆಗೆ ದಾರಿಯಾದ ಬಿಟ್ ಕಾಯಿನ್ ದಂಧೆಯನ್ನು ಯಾರು ಹೇಳೋರಿಲ್ಲ.. ಕೇಳೋರಿಲ್ಲದಂತಾಗಿದೆ.








