Friday, March 29, 2024
spot_imgspot_img
spot_imgspot_img

ಪೇಡ ನಗರಿಗೆ ಮತ್ತೊಂದು ಹೆಮ್ಮೆಯ ಗರಿ : ಶೀಘ್ರದಲ್ಲಿ ಪ್ರಾರಂಭವಾಗಲಿದೆ ‘ಐಐಐಟಿ’

- Advertisement -G L Acharya panikkar
- Advertisement -

ಧಾರವಾಡ: ವಿದ್ಯಾನಗರಿ, ಖ್ಯಾತ ಸಾಹಿತಿಗಳ ಜನ್ಮಭೂಮಿ, ಕರ್ನಾಟಕದ ಶಿಕ್ಷಣ ಕಾಶಿ, ಪೇಡಾ ನಗರಿ ಹೀಗೆ ಹಲವಾರು ಹೆಸರುಗಳನ್ನು ಹೊಂದಿರುವಂತಹ ಧಾರವಾಡಕ್ಕೆ ಇದೀಗ ಮತ್ತೊಂದು ಹಿರಿಮೆ ಸಲ್ಲುತ್ತಿದೆ. ಧಾರವಾಡ ಇದೀಗ ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಸದ್ದು ಮಾಡಲಿದೆ. ಈಗಾಗಲೇ ಮೂರು ಪ್ರಮುಖ ವಿಶ್ವವಿದ್ಯಾನಿಲಯಗಳನ್ನು ಧಾರವಾಡ ಹೊಂದಿದೆ.

ಇದರ ಜೊತೆ ಕಳೆದ ವರ್ಷ ಧಾರವಾಡದಲ್ಲಿ ಐಐಟಿ ಪ್ರಾರಂಭವಾಗಿತ್ತು. ಇದೀಗ ಧಾರವಾಡದಲ್ಲಿ ಐಐಐಟಿ ಪ್ರಾರಂಭವಾಗುತ್ತಿದ್ದು ಇದು ಧಾರವಾಡವನ್ನು ಮತ್ತಷ್ಟು ಬೆಳಗುವಂತೆ ಮಾಡಲಿದೆ. ಧಾರವಾಡ ಜಿಲ್ಲೆಯ ತಡಸಿಕೊಪ್ಪ ಗ್ರಾಮದ ಬಳಿ 117 ಕೋಟಿ ರೂಪಾಯಿ ವೆಚ್ಚದಲ್ಲಿ ಐಐಐಟಿಯ ನೂತನ ಕಟ್ಟಡ ಕಾಮಗಾರಿ ಸಂಪೂರ್ಣ ಮುಕ್ತಾಯದ ಹಂತಕ್ಕೆ ಬಂದಿದೆ.

ಈಗಾಗಲೇ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ ಹಾಗೂ ಕಾನೂನು ವಿಶ್ವವಿದ್ಯಾಲಯ ಸೇರಿದಂತೆ ಮೂರು ಪ್ರಮುಖ ವಿಶ್ವವಿದ್ಯಾಲಯಗಳಿವೆ. ಇದರ ಜೊತೆಯಲ್ಲಿ ಐಐಟಿ ಕೂಡ ಆರಂಭವಾಗಿದೆ. ಐಐಐಟಿ ಕಟ್ಟಡದ ಕಾಮಗಾರಿ ಇನ್ನು ಎರಡು ತಿಂಗಳಲ್ಲಿ ಮುಕ್ತಾಯವಾಗಲಿದ್ದು, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಧಿಕೃತವಾಗಿ ಬೃಹತ್ ಕ್ಯಾಂಪಸ್ ನಲ್ಲಿ ತರಗತಿಗಳು ಆರಂಭಗೊಳ್ಳಲು ಸಜ್ಜಾಗಿದೆ.

ಧಾರವಾಡದಲ್ಲಿ ಐಐಐಟಿ ಮತ್ತು ಐಐಟಿಯ ಎರಡೂ ಬೃಹತ್ ಕ್ಯಾಂಪಸ್ಸು ಗಳು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಕಾರ್ಯನಿರ್ವಹಿಸಲಿದೆ. ಐಐಐಟಿಯ ನೂತನ ಕ್ಯಾಂಪಸ್ ನಲ್ಲಿ ವಿವಿಧೋದ್ದೇಶ ಸಭಾಂಗಣ, ವರ್ಗ ಕೋಣೆಗಳು, ಆಡಳಿತ ಭವನ, ತರಗತಿ ಕೊಠಡಿಗಳು, ಗ್ರಂಥಾಲಯ ಹಾಗೂ ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ ಹೈಟೆಕ್ ವ್ಯವಸ್ಥೆ ಹೊಂದಿದ ಕ್ಯಾಂಪಸ್ ನಿರ್ಮಾಣ ಮಾಡಲಾಗಿದೆ.

ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಗಳು ಬರದಿಂದ ಸಾಗಿದ್ದು ಏಪ್ರಿಲ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಒಟ್ಟು 61 ಎಕರೆ ಜಮೀನಲ್ಲಿ 117 ಕೋಟಿ ವೆಚ್ಚದಲ್ಲಿ ಐಐಐಟಿ ಕಟ್ಟಡ ಕಾಮಗಾರಿ ನಡೆದಿದೆ. ಸದ್ಯ ಐಐಐಟಿಯ ತರಗತಿಗಳು ಹುಬ್ಬಳ್ಳಿಯ ಐಟಿ ಪಾರ್ಕ್ ನಲ್ಲಿ ನಡೆಯುತ್ತಿವೆ.

- Advertisement -

Related news

error: Content is protected !!