Sunday, July 19, 2026
spot_imgspot_img
spot_imgspot_img

ದಾವಣಗೆರೆ: ಶಾಸಕ ಬಿ.ಪಿ.ಹರೀಶ್‌ ಬಂಧನಕ್ಕೆ ವಾರಂಟ್‌

- Advertisement -
- Advertisement -

ದಾವಣಗೆರೆ: ಶಾಸಕ ಬಿ.ಪಿ.ಹರೀಶ್‌ ಬಂಧನಕ್ಕೆ ಜನಪ್ರತಿನಿಧಿ ವಿಶೇಷ ನ್ಯಾಯಾಲಯ ವಾರಂಟ್‌ ಹೊರಡಿಸಿದೆ.

ಜಾತಿನಿಂದನೆ ಪ್ರಕರಣವೊಂದರ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಕೋರ್ಟ್‌ನ ನ್ಯಾಯಮೂರ್ತಿ ಸಂತೋಶ್‌ ಗಜಾನನ ಭಟ್‌ ಅವರು ಬಂಧನದ ವಾರಂಟ್‌ ಜಾರಿ ಮಾಡಿದ್ದು, ಇದೇ 7ರಂದು ಕೋರ್ಟ್‌ಗೆ ಶಾಸಕರನ್ನು ಹಾಜರುಪಡಿಸುವಂತೆ ಹರಿಹರ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ಕೋರ್ಟ್‌ ಆದೇಶಿಸಿದೆ.

2023 ವಿಧಾನಸಭೆಯ ಚುನಾವಣಾ ಫಲಿತಾಂಶದ ಮರುದಿನ ದಲಿತ ಸಮಾಜದ ಬಗ್ಗೆ ಶಾಸಕ ಬಿ.ಪಿ.ಹರೀಶ್ ಅವಹೇಳನಕಾರಿಯಾಗಿ ಮಾತನಾಡಿದ್ದರು. ಹರಿಹರ ಬಿಎಸ್ಪಿ ಮುಖಂಡ ಹನುಮಂತಪ್ಪ ಎಂಬವರು ಹರಿಹರನಗರ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರು. ಹೈಕೋರ್ಟ್‌ ಆದೇಶ ಬರುತ್ತಿದ್ದಂತೆ ಹರಿಹರ ನಗರ ಠಾಣೆಯ ಪೊಲೀಸರು ಆಕ್ಟಿವ್‌ ಆಗಿದ್ದಾರೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!