- Advertisement -
- Advertisement -



ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿದ್ದ ಪುತ್ತೂರು ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆ ಬಳಿ ನಿವಾಸಿ ಗುರುಪ್ರಸಾದ್ ದೇವಾಡಿಗ (45) ಅವರು ಇಂದು ನಿಧನರಾಗಿದ್ದಾರೆ.
ಮೃತರಿಗೆ 8 ತಿಂಗಳ ಹಿಂದೆ ಶ್ವಾಸಕೋಶದ ತೊಂದರೆಗೆ ಒಳಗಾಗಿದ್ದಾರು. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರೂ ಗುಣಮುಖರಾಗಿರಲಿಲ್ಲ.ಆರಂಭದಲ್ಲಿ ಪುತ್ತೂರಿನ ವಿವಿಧ ಬೇಕರಿಗಳಲ್ಲಿ ಕೆಲಸ ಮಾಡಿದ ಅವರು ಬಳಿಕ ಮನೆ ಸಮೀಪವೇ ಹೊಟೇಲ್ ಒಂದನ್ನು ತೆರೆದಿದ್ದರು. 2-3 ವರ್ಷ ಹೊಟೇಲ್ ನಡೆಸಿದ್ದು ಬಳಿಕ ಅದನ್ನು ಬಂದ್ ಮಾಡಿದ್ದರು.
ಪ್ರಸ್ತುತ ಅವರು ವಿವಿಧ ಉತ್ಪನ್ನಗಳ ಲೈನ್ ಸೇಲ್ ಮಾಡುತ್ತಿದ್ದರು.ಮೃತರು ತಾಯಿ ಮತ್ತು ಪತ್ನಿಯನ್ನು ಅಗಲಿದ್ದಾರೆ.
- Advertisement -








