Sunday, June 21, 2026
spot_imgspot_img
spot_imgspot_img

ವಿಟ್ಲ: ಅಂಗಡಿ ಮುಂದೆ ಯುವಕನ ಮೃತದೇಹ ಪತ್ತೆ

- Advertisement -
- Advertisement -

ವಿಟ್ಲ : ಕನ್ಯಾನ ಜಂಕ್ಷನಲ್ಲಿನ ಅಂಗಡಿಯೊಂದರ ಮುಂದೆ ಯುವಕನೋರ್ವನ ಮೃತದೇಹ ಕಂಡುಬಂದಿದೆ. ಬುಧವಾರ ಮುಸ್ಸಂಜೆ ಕೆಲ ಕ್ಷಣಗಳ ಮೊದಲು ಕುಳಿತುಕೊಂಡಿದ್ದ ಯುವಕ ಇದ್ದಕ್ಕಿದ್ದಂತೆ ಮೃತಪಟ್ಟ ವಿಚಾರ ಜನರ ಕುತೂಹಲಕ್ಕೆ ಕಾರಣವಾಗಿದೆ.

ಮೂಲತಃ: ಸಾಲೆತ್ತೂರು ಸಮೀಪದ ಮೆದು ನಿವಾಸಿಯಾಗಿದ್ದು ಪ್ರಸ್ತುತ ಕನ್ಯಾನ ಪಿಲಿಚಾಮುಂಡಿ ಗುಡ್ಡೆ ನಿವಾಸಿ ಸುರೇಶ್ ನಾಯ್ಕ (32) ಮೃತಪಟ್ಟ ವ್ಯಕ್ತಿಯೆಂದು ಪರಿಚಯಸ್ಥರು ತಿಳಿಸಿದ್ದಾರೆ. ವಿಪರೀತ ಕುಡಿತದ ಚಟ ಹೊಂದಿರುವ ಈತ ಅದೇ ಕಾರಣದಿಂದಾಗಿ ಕುಸಿದುಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಸ್ಥಳಕ್ಕೆ 112ಪೊಲೀಸರು ಹಾಗೂ ವಿಟ್ಲ ಪೊಲೀಸರು ಆಗಮಿಸಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

- Advertisement -

Related news

error: Content is protected !!