Friday, March 29, 2024
spot_imgspot_img
spot_imgspot_img

ಚಿನ್ನ ಕಳ್ಳ ಸಾಗಣೆ – ಏರ್ ಇಂಡಿಯಾ ಸಿಬ್ಬಂದಿ ಬಂಧನ!!

- Advertisement -G L Acharya panikkar
- Advertisement -

ನವದೆಹಲಿ: ಚಿನ್ನ ಕಳ್ಳ ಸಾಗಣೆ ಆರೋಪದಡಿ ಏರ್ ಇಂಡಿಯಾ ಸಿಬ್ಬಂದಿಯೊಬ್ಬರನ್ನು ಬಂಧಿಸಲಾಗಿದೆ.
ಸಾಗಣೆ ಮಾಡಲಾದ ಚಿನ್ನದ ಮೌಲ್ಯ ಸುಮಾರು 45 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಎರಡು ಗಂಟೆಗಳ ನಿರಂತರ ವಿಚಾರಣೆ ಬಳಿಕ ಏರ್ ಇಂಡಿಯಾ ಸಿಬ್ಬಂದಿಯೊಬ್ಬರನ್ನು ಬಂಧಿಸಲಾಗಿದೆ.

ಟೊರೆಂಟೋದಿಂದ ನವದೆಹಲಿಗೆ ಆಗಮಿಸಿದ ವಿಮಾನದಲ್ಲಿ ಅಕ್ರಮವಾಗಿ ಚಿನ್ನವನ್ನು ಸಾಗಣೆ ಮಾಡಲಾಗಿದೆ. ಭಾರತಕ್ಕೆ ಆಗಮಿಸಿದ ವಿಮಾನದಲ್ಲಿ ಬೆಳ್ಳಿ ಲೇಪಿತ ಎರಡು ಕಡಗಗಳನ್ನು ಅಕ್ರಮವಾಗಿ ಸಾಗಣೆ ಮಾಡಲಾಗಿದೆ.
ನವೆಂಬರ್ 22ರಂದು ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಏರ್ ಇಂಡಿಯಾ ವಿಮಾನದ ಕ್ಯಾಬಿನ್ ಸಿಬ್ಬಂದಿ ಬಂಧಿತ ಆರೋಪಿ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ನಿಲ್ದಾಣ ದ್ವಾರದಲ್ಲಿ ಕಸ್ಟಮ್ಸ್ ಅಧಿಕಾರಿಗಳನ್ನು ಕಂಡ ಬಳಿಕ ಸಿಬ್ಬಂದಿ ವಿಮಾನದ ಸೀಟಿನ ಕೆಳಗೆ ಕಡಗಗಳನ್ನು ಬಚ್ಚಿಟ್ಟಿದ್ದ. ಅಧಿಕಾರಿಗಳ ವಿಚಾರಣೆ ಬಳಿಕ ವಿಮಾನದಲ್ಲಿದ್ದ ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

- Advertisement -

Related news

error: Content is protected !!