Wednesday, April 24, 2024
spot_imgspot_img
spot_imgspot_img

ಭಾರತಕ್ಕೆ ಬಂದಿಳಿದಿದೆ ವಿವಿಐಪಿಗಳ ಬೋಯಿಂಗ್‌‌ 777 ಎರಡನೇ ವಿಶೇಷ ವಿಮಾನ

- Advertisement -G L Acharya panikkar
- Advertisement -

ದೆಹಲಿ(ಅ.26):ಅತಿಗಣ್ಯರ ಪ್ರವಾಸಕ್ಕಾಗಿ ವಿನ್ಯಾಸಗೊಂಡ ಬೋಯಿಂಗ್‌‌ 777ರ ಎರಡನೇ ವಿಶೇಷ ವಿಮಾನ ಭಾನುವಾರ ಭಾರತಕ್ಕೆ ಬಂದಿಳಿದಿದೆ.ಈ ವಿಶೇಷ ವಿಮಾನ ಬಳಸುವ ಅತಿಗಣ್ಯರ ಪಟ್ಟಿಯಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿ ಹುದ್ದೆಗಳಿವೆ.

ಈ ವಿಮಾನವು ಇಂಧನ ತುಂಬಿಸಲು ನಿಲ್ಲದೇ ಅಮೇರಿಕಾ ಹಾಗೂ ಭಾರತದ ನಡುವೆ ಹಾರಬಲ್ಲದು. ಮೊದಲು ಮಾರ್ಪಡಿಸಿದ ವಿಮಾನವು ಅಕ್ಟೋಬರ್‌ 1ರಂದು ಭಾರತಕ್ಕೆ ಬಂದಿತ್ತು. ಆದರೆ ಈ ವಿಮಾನದ ಕಾರ್ಯಚರಣೆಯ ಸಂದರ್ಭ ಕೆಲವು ದೋಷಗಳು ಕಾಣಿಸಿಕೊಂಡಿದ್ದು. ಈ ಬಗ್ಗೆ ಭಾರತದ ಅಧಿಕಾರಿಗಳು ಬೋಯಿಂಗ್‌ ಕಂಪೆನಿಗೆ ಮಾಹಿತಿ ನೀಡಿದ್ದರು.

2018ರಲ್ಲಿ ಬೋಯಿಂಗ್‌ 777-300 ಎಆರ್‌ ಮಾದರಿಯ ಎರಡು ವಿಮಾನಗಳು ಏರ್‌ ಇಂಡಿಯಾಕ್ಕೆ ಸೇರ್ಪಡೆಗೊಂಡಿದ್ದವು. ಇವುಗಳ ಅಗತ್ಯ ಮಾರ್ಪಾಡು ಮಾಡಲು ಬೋಯಿಂಗ್‌‌ನ ಡಲ್ಲಾಸ್‌‌‌ ಕಾರ್ಖಾನೆಗೆ ಕಳುಹಿಸಲಾಗಿತ್ತು.ವಿಮಾನವನ್ನು ಭಾರತಕ್ಕೆ ಹಿಂದಿರುಗಿಸಲು ಹಾಗೂ ತಾಂತ್ರಿಕ ಅವಶ್ಯಕತೆಗಳನ್ನು ನಿರ್ಣಯಿಸಲು ಕೇಂದ್ರವು ಭಾರತೀಯ ವಾಯುಪಡೆ ಹಾಗೂ ಏರ್‌‌ ಇಂಡಿಯಾದ ಹಿಇಯ ಅಧಿಕಾರಿಗಳ ತಂಡವನ್ನು ಕಳುಹಿಸಿತ್ತು. ಈ ವಿಮಾನದಲ್ಲಿ ರಕ್ಷಣ ವ್ಯವಸ್ಥೆ ಸೇರಿದಂತೆ ಸ್ವಯಂ ರಕ್ಷಣಾ ವ್ಯವಸ್ಥೆಗಳಿವೆ.

ಭಾರತದ ಅತಿಗಣ್ಯರ ಬಳಕೆಗೆ ಖರೀದಿಸಿರುವ ಈ ವಿಮಾನಗಳನ್ನು ಏರ್‌ ಇಂಡಿಯಾ ಒನ್‌‌ ಎಂದು ಕರೆಯಲಾಗುತ್ತದೆ.

- Advertisement -

Related news

error: Content is protected !!