Thursday, May 9, 2024
spot_imgspot_img
spot_imgspot_img

ಪೆಟ್ರೋಲ್‌ಗಿಂತಲೂ ದುಬಾರಿಯಾದ ಟೊಮೆಟೋ; ಪಡಿತರ ಅಂಗಡಿಯಲ್ಲಿ ಸಬ್ಸಿಡಿ ದರದಲ್ಲಿ ಟೊಮೆಟೋ ಮಾರಾಟಕ್ಕೆ ಮುಂದಾದ ತಮಿಳುನಾಡು ಸರ್ಕಾರ

- Advertisement -G L Acharya panikkar
- Advertisement -
vtv vitla

ಟೊಮೆಟೋ ಬೆಲೆಯಲ್ಲಿ ಭಾರೀ ಏರಿಕೆಯಾದ ಬೆನ್ನಲ್ಲೇ ತಮಿಳುನಾಡು ಸರ್ಕಾರ ನ್ಯಾಯಬೆಲೆ ಅಂಗಡಿಗಳಲ್ಲಿ ಸಬ್ಸಿಡಿ ದರದಲ್ಲಿ ಟೊಮೆಟೋ ವಿತರಣೆ ಆರಂಭಿಸಿದೆ.

ಟೊಮೆಟೋ ಬೆಲೆ ಹಲವೆಡೆ ಈಗ 150 ರೂ. ತಲುಪಿದ್ದು, ಪಡಿತರ ಅಂಗಡಿಗಳಲ್ಲಿ ಕೆ.ಜಿಗೆ 60ರೂ.ನಂತೆ ಟೊಮೆಟೋ ಮಾರಾಟ ಮಾಡಲಾಗುತ್ತಿದೆ. ಟೊಮೆಟೊ ಮಾತ್ರವಲ್ಲದೇ ಎಲ್ಲಾ ತರಕಾರಿಗಳ ಬೆಲೆ ಏರಿಕೆಯಾಗಿದ್ದು, ಕ್ಯಾರೆಟ್, ಬೀನ್ಸ್ ಬೆಲೆ 100 ರೂ. ಗಡಿ ದಾಟಿದೆ.

“ಇಂದಿನಿಂದ ಪಡಿತರ ಅಂಗಡಿಗಳಲ್ಲಿ ಟೊಮೆಟೋ ಕೆಜಿಗೆ 60 ರೂ.ಗೆ ಮಾರಾಟವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಕೆಜಿಗೆ 100-130 ರೂ.ಗೆ ಲಭ್ಯವಿದ್ದು, ಸರಕಾರ ಅರ್ಧ ಬೆಲೆಗೆ ಮಾರಾಟ ಆರಂಭಿಸಿರುವುದು ನಮಗೆ ಸಂತಸ ತಂದಿದೆ ಎನ್ನುತ್ತಾರೆ” ತಮಿಳುನಾಡಿನ ಪಡಿತರ ಅಂಗಡಿಯಲ್ಲಿ ಟೊಮೆಟೋ ಖರೀದಿಸಿದ ಮಹಿಳೆ. ಈ ಉತ್ತಮ ಕ್ರಮಕ್ಕಾಗಿ ನಾವು ನಮ್ಮ ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇವೆ.

- Advertisement -

Related news

error: Content is protected !!