Friday, April 19, 2024
spot_imgspot_img
spot_imgspot_img

ಡೆಲ್ಟಾ ಪ್ಲಸ್ ರೂಪಾಂತರದ ಉಲ್ಬಣ; ಕರ್ನಾಟಕವನ್ನು ಎಚ್ಚರಿಸಿದ ಕೇಂದ್ರ

- Advertisement -G L Acharya panikkar
- Advertisement -

ಬೆಂಗಳೂರು: ಡೆಲ್ಟಾ ಪ್ಲಸ್ ವೈರಸ್ ಹರಡುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ‘ಡೆಲ್ಟಾ ಪ್ಲಸ್’ ರೂಪಾಂತರದ ಬಗ್ಗೆ ಕರ್ನಾಟಕ ಸರ್ಕಾರವನ್ನು ಎಚ್ಚರಿಸಿದೆ.

ಕೊರೊನಾದ ಹೊಸ ರೂಪಾಂತರವು ಪತ್ತೆಯಾದ ಜಿಲ್ಲೆಗಳಲ್ಲಿ ಜನಸಂದಣಿ ಮತ್ತು ಒಟ್ಟುಗೂಡುವ ಕಾರ್ಯಕ್ರಮಗಳಿಗೆ ತಡೆ ಹಾಕುವಂತೆ ಕೇಂದ್ರವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿದ್ದು, “ಕೇಂದ್ರವು ‘ಸಾರ್ವಜನಿಕ ಆರೋಗ್ಯ ಜಾಗೃತಿಯು ಹೆಚ್ಚು ಕೇಂದ್ರೀಕೃತ ಮತ್ತು ಕಠಿಣವಾಗಬೇಕಿದೆ.

ಜನಸಂದಣಿ, ಪರಸ್ಪರ ಬೆರೆಯುವುದನ್ನು ತಡೆಯುವುದು, ವ್ಯಾಪಕವಾದ ಪರೀಕ್ಷೆ, ಟ್ರೇಸಿಂಗ್ ಮತ್ತು ಹೆಚ್ಚು ಲಸಿಕೆ ವಿತರಣೆಗೆ ಆದ್ಯತೆಯ ಆಧಾರದ ಮೇಲೆ ತಕ್ಷಣದ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಿ” ಎಂದು ಅವರು ಹೇಳಿದ್ದಾರೆ.

ಇನ್ನು ಕರ್ನಾಟಕದ ಹೊರತಾಗಿ, ಕೇಂದ್ರವು ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲೂ ಹೊಸ ರೂಪಾಂತರದ ಬಗ್ಗೆ ಎಚ್ಚರಿಕೆ ನೀಡಿದೆ.

- Advertisement -

Related news

error: Content is protected !!