Saturday, July 25, 2026
spot_imgspot_img
spot_imgspot_img

6 ವರ್ಷದ ಮಗುವನ್ನು ಬಲಿಪಡೆದುಕೊಂಡ ಡೆಂಗ್ಯೂ..!

- Advertisement -
- Advertisement -
driving

ರಾಯಚೂರು: ಸಿಂಧನೂರು ನಗರದ ಮಹಿಬೂಬಿಯಾ ಕಾಲೊನಿಯ ಅಂಗನವಾಡಿ ಕಾರ್ಯಕರ್ತೆ ಅನಿತಾ ಅವರ ಪುತ್ರಿ ಸೋನು (6) ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಗುಣಮುಖವಾಗದೆ ಅಸುನೀಗಿದ ಘಟನೆ ನಡೆದಿದೆ.

ಕಳೆದ ವಾರ ಜ್ವರ ಕಾಣಿಸಿಕೊಂಡಾಗ ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಜ್ವರ ಕಡಿಮೆಯಾಗದ ಕಾರಣ ಖಾಸಗಿ ಆಸ್ಪತ್ರೆಯಲ್ಲೂ ತಪಾಸಣೆ ಮಾಡಿಸಿದ್ದರು. ಪ್ಲೇಟ್ಲೆಟ್ ಗಣನೀಯ ಇಳಿಮುಖವಾಗುವುದು ಕಂಡು ಬಂದಿತ್ತು. ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಗುರುವಾರ ಮಗುವನ್ನು ದಾಖಲಿಸಲಾಗಿತ್ತು.

ಇನ್ನೂ ರಾಯಚೂರು ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದುವರೆಗೆ ಜಿಲ್ಲೆಯಲ್ಲಿ 1,500ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ ತಿಳಿದು ಬಂದಿದೆ. ಕೇವಲ ರಾಯಚೂರು ಜಿಲ್ಲೆಗೆ ಮಾತ್ರ ಡೆಂಗ್ಯೂ ಕೇಸ್ ಸೀಮಿತಗೊಂಡಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಈ ಡೆಂಗ್ಯೂ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಕೂಡ ಹಗಲಿರುಳು ಶ್ರಮಿಸುತ್ತಿದೆ.

- Advertisement -

Related news

error: Content is protected !!