- Advertisement -
- Advertisement -




ಅಯೋಧ್ಯೆ: ಬೆಳಕಿನ ಹಬ್ಬ ದೀಪಾವಳಿಯಲ್ಲಿ ರಾಮ ಜನ್ಮಭೂಮಿ ಅಯೋಧ್ಯೆ ಕಂಗೊಳಿಸುತ್ತಿದ್ದು, ರವಿವಾರ ಸರಯೂ ನದಿಯ ಉದ್ದಕ್ಕೂ 26.17 ಲಕ್ಷ ದೀಪಗಳನ್ನು ಹಚ್ಚುವ ಮೂಲಕ ಈ ಬಾರಿಯ ದೀಪೋತ್ಸವವು ಹೊಸ ವಿಶ್ವ ಗಿನ್ನೆಸ್ ದಾಖಲೆಯನ್ನು ಸೃಷ್ಟಿಸಿದೆ ಎಂದು ಉತ್ತರಪ್ರದೇಶ ಸರಕಾರ ಹೇಳಿದೆ.
ಕಳೆದ ವರ್ಷ 25 ಲಕ್ಷ ದೀಪಗಳನ್ನು ಹಚ್ಚುವ ಮೂಲಕ ಅದು ಕೂಡ ಗಿನ್ನೆಸ್ ದಾಖಲೆ ಬರೆದಿತ್ತು.ಈ ದೀಪೋತ್ಸವದಲ್ಲಿ 2,128 ಮಂದಿ ಆರತಿ ನೆರವೇರಿಸಿದರು. ಒಟ್ಟು 26,17,215 ದೀಪಗಳನ್ನು ಹಚ್ಚಿದ್ದು, ಅವುಗಳನ್ನು ವಿಶ್ವ ಗಿನ್ನೆಸ್ ದಾಖಲೆಯ ಪ್ರತಿನಿಧಿಗಳು ಡೋನ್‌ಗಳನ್ನು ಬಳಸಿ ದೀಪಗಳ ಸಂಖ್ಯೆಯನ್ನು ಲೆಕ್ಕಹಾಕಿದ್ದು, ಗಿನ್ನೆಸ್ ದಾಖಲೆಯಾಗಿದೆ ಎಂದು ಘೋಷಿಸಿದ್ದಾರೆ ಎಂದು ಸರಕಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿಉಲ್ಲೇಖಿಸಿದೆ.
ಉತ್ತರಪ್ರದೇಶದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಜೈವೀರ್ ಸಿಂಗ್ ಹಾಗೂ ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜತ್ ಗಿನ್ನೆಸ್ ದಾಖಲೆಯ ಪ್ರಮಾಣ ಪತ್ರವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪ್ರದಾನ ಮಾಡಿದರು.
- Advertisement -







