Thursday, May 2, 2024
spot_imgspot_img
spot_imgspot_img

ದೇರಳಕಟ್ಟೆ: ಸ್ವೀಟ್ ಕಾರ್ನರ್ ಸ್ಟಾಲ್‌ನಲ್ಲಿ ಗ್ಯಾಸ್ ಸಿಡಿದು ಬೆಂಕಿ ಅವಘಡ; ತಪ್ಪಿದ ಅನಾಹುತ..!

- Advertisement -G L Acharya panikkar
- Advertisement -

ದೇರಳಕಟ್ಟೆ: ರಸ್ತೆಬದಿಯಲ್ಲಿ ಇರಿಸಲಾದ ಸ್ವೀಟ್ ಕಾರ್ನರ್ ಸ್ಟಾಲ್ ಒಂದರ ಗ್ಯಾಸ್ ಸಿಲಿಂಡರಿನಲ್ಲಿ ಗ್ಯಾಸ್ ಸೋರಿಕೆ ಉಂಟಾಗಿ, ಬೆಂಕಿ ಅವಘಡ ಸಂಭವಿಸಿದ ಘಟನೆ ದೇರಳಕಟ್ಟೆ ಸಮೀಪ ಇಂದು ಸಂಜೆ ವೇಳೆ ನಡೆದಿದೆ.

ಬಶೀರ್ ಎಂಬವರು ವ್ಯವಹಾರದಲ್ಲಿ ತೊಡಗಿದ್ದ ಸಂದರ್ಭ ಗ್ಯಾಸ್ ಸೋರಿಕೆ ಉಂಟಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಅಲ್ಲಿದ್ದ ಗ್ರಾಹಕರು ಹಾಗೂ ಸ್ಟಾಲ್ ಮಾಲೀಕರು ಓಡಿ ಪಾರಾಗಿದ್ದಾರೆ. ಇನ್ನು ಬೆಂಕಿ ತೀವ್ರಗೊಂಡ ಪರಿಣಾಮ ಸಾರ್ವಜನಿಕರು ಹೊಯ್ಗೆ, ನೀರು ಹಾಯಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೂ ಸಿಲಿಂಡರ್ ಪೂರ್ತಿ ಸೋರಿಕೆಯುಂಟಾಗಿ ಸ್ಟಾಲ್ ಭಾಗಶಃ ಸುಟ್ಟುಹೋಗಿದೆ.

ಘಟನೆಯಿಂದ ಸಾರ್ವಜನಿಕರು ಹಾಗೂ ಬಶೀರ್ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಜೊತೆಗೆ ಅವಘಡದಿಂದ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!