- Advertisement -
- Advertisement -


ರಾಮನಗರ: ಹಸು ತೊಳೆದ ಬಳಿಕ ಎಲೆಕ್ಟ್ರಿಕ್ ಮೋಟಾರ್ ಸ್ವಿಚ್ ಆಫ್ ಮಾಡಲು ಹೋದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ವಿದ್ಯುತ್ ಶಾಕ್ಗೆ ಬಲಿಯಾಗಿರುವ ದಾರುಣ ಘಟನೆ ರಾಮನಗರ ತಾಲೂಕಿನ ಗದಗಯ್ಯನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ತರುಣ್ (17) ಮೃತ ದುರ್ದೈವಿ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ತರುಣ್, ಇಂದು ಎಲೆಕ್ಟ್ರಿಕ್ ಮೋಟಾರ್ ಆನ್ ಮಾಡಿ ಹಸು ತೊಳೆಯುತ್ತಿದ್ದ. ಹಸು ತೊಳೆದ ಬಳಿಕ ನೀರಿನ ಮೋಟಾರ್ ನಿಲ್ಲಿಸಲು ಸ್ವಿಚ್ ಆಫ್ ಮಾಡಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಶಾಕ್ ತಗುಲಿದೆ. ವಿದ್ಯುತ್ ಆಘಾತದ ತೀವ್ರತೆಗೆ ತರುಣ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಮಗನನ್ನು ಕಳೆದುಕೊಂಡ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕ ಆವರಿಸಿದೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -








