Saturday, April 27, 2024
spot_imgspot_img
spot_imgspot_img

ವಿಟ್ಲ: ಅದ್ದೂರಿಯಾಗಿ ಸಂಪನ್ನಗೊಂಡ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಕಂಬಳಬೆಟ್ಟು ಇಲ್ಲಿನ 52 ನೇ ವರ್ಷದ ಶ್ರೀ ಮಹಾಗಣೇಶೋತ್ಸವ

- Advertisement -G L Acharya panikkar
- Advertisement -

ವೈಭವದ ಶೋಭಾಯಾತ್ರೆಯಲ್ಲಿ ಹರಿದು ಬಂದ ಭಕ್ತಸಾಗರ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರೇರಣೆಯಿಂದ ಕಳೆದ 51 ವರ್ಷಗಳಿಂದ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಕಂಬಳಬೆಟ್ಟು ಇಲ್ಲಿನ 52 ನೇ ವರ್ಷದ ಶ್ರೀ ಮಹಾಗಣೇಶೋತ್ಸವವು ಸೆ.19 ರಿಂದ 21 ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾಕೂಟ, ಅನ್ನಸಂತರ್ಪಣೆ ಹಾಗೂ ವೈಭವದ ಶೋಭಾಯಾತ್ರೆಯೊಂದಿಗೆ ಧರ್ಮನಗರ ಸಮಾಜ ಮಂದಿರದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.

ಸೆ.19 ರ ಮೊದಲನೇ ದಿನ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ಮತ್ತು ಹಗ್ಗ ಜಗ್ಗಾಟ ಸ್ಪರ್ಧೆ ಏರ್ಪಡಿಸಲಾಯಿತು. ರಾತ್ರಿ ಮಹಾಪೂಜೆ ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು.

ಸೆ. 20 ಗಣೇಶೋತ್ಸವದ ಎರಡನೇ ದಿನದಂದು ಬೆಳಿಗ್ಗೆ ಸಾರ್ವಜನಿಕ ಕಬಡ್ಡಿ ಪಂದ್ಯಾಟ ನಡೆಯಿತು. ರಾತ್ರಿ ಶ್ರೀ ದೇವರಿಗೆ ವಿಶೇಷ ರಂಗಪೂಜೆ ನಡೆದು ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಾರತ ಎನ್ನುವ ಕಲ್ಪನೆಯನ್ನು ಕಣ್ಣ ಮುಂದೆ ಇಟ್ಟುಕೊಂಡಿರುವ ಬೆಂಗಳೂರಿನ ಯುವವಾಗ್ಮಿ ಹಾರಿಕಾ ಮಂಜುನಾಥ್ ಭಾಗವಹಿಸಿ ಧಾರ್ಮಿಕ ಪ್ರವಚನ ಗೈದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ರಾಘವ ಮಂಜಪ್ಪಾಲು ಉಪಸ್ಥಿತರಿದ್ದರು.

ಮಹಾ ಗಣೇಶೋತ್ಸವದ ಮೂರನೇ ದಿನ ಬೆಳಿಗ್ಗೆ 40 ಕೆಜಿ ವಿಭಾಗದ ಮಕ್ಕಳ ಕಬಡ್ಡಿ ಪಂದ್ಯಾಟ ನಡೆಯಿತು. ಮದ್ಯಾಹ್ನ ಮಹಾಪೂಜೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲದ ಉದ್ಯಮಿ ಕೊಡುಗೈ ದಾನಿಗಳಾದ ಸುಭಾಷ್‌ ನಾಯಕ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಸ್ವಯಂ ಸೇವಕಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹ ಸಹ ಕಾರ್ಯವಾಹ ಚೇತನ್‌ ಕುಮಾರ್‌ ಕಡೆಶಿವಾಲಯ ಉಪಸ್ಥಿತರಿದ್ದರು.

ಬಳಿಕ ಸಂಜೆ ಆಕರ್ಷಣೀಯ ಮೆರವಣಿಗೆಯಲ್ಲಿ ಗಣೇಶನ ಭವ್ಯ ಶೋಭಯಾತ್ರೆಯು ಧರ್ಮನಗರದಿಂದ ಹೊರಟು ನೂಜಿ, ಉರಿಮಜಲು, ಅಶೋಕ ನಗರ ಮಾರ್ಗವಾಗಿ ಆರ್ಕೆಚ್ಚಾರು ಡಾ. ಸಂಜೀವ ರೈ ಯವರ ಕೆರೆಯಲ್ಲಿ ಮೂರ್ತಿ ಜಲಸ್ಥಂಭನಗೊಂಡಿತ್ತು. ಆರ್‌ಕೆ ಆರ್ಟ್ಸ್ ವಿಟ್ಲ ಹಾಗೂ ಏಕಾದಂತ ಬಳಗ ಪೆರ್ಲ ಇವರ ಕುಣಿತ ಭಜನೆ ಶೋಭಾಯಾತ್ರೆಗೆ ಮೆರುಗನ್ನು ನೀಡಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತಾದಿಗಳು ಗಣೇಶನ ಕೃಪೆಗೆ ಪಾತ್ರರಾದರು.

- Advertisement -

Related news

error: Content is protected !!