- Advertisement -
- Advertisement -



ಬೆಳ್ತಂಗಡಿ : ಬುರುಡೆ ಪ್ರಕರಣದಿಂದ ಧರ್ಮಸ್ಥಳ ಕ್ಷೇತ್ರದವರನ್ನು ಸಂತ್ರಸ್ತರೆಂದು ಪರಿಗಣಿಸಬೇಕೆಂಬ ಧರ್ಮಸ್ಥಳ ಕ್ಷೇತ್ರದ ಪರ ವಕೀಲ ರಾಜಶೇಖರ್ ಹಿಲಿಯಾರ್ ಅರ್ಜಿಗೆ ತಿಮರೋಡಿ ಪರ ವಕೀಲ ವಿಜಯ ವಾಸು ಪೂಜಾರಿಯವರು ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶ ರಾಜೇಂದ್ರ ಪ್ರಸಾದ್ ಮುಂದೆ ಆಕ್ಷೇಪಣೆ ಸಲ್ಲಿಸಿದರು.ಆ ಎರಡೂ ಅರ್ಜಿ ಮತ್ತು ಆಕ್ಷೇಪಣಾ ಅರ್ಜಿಗಳು ಮಾನ್ಯವಿಲ್ಲವೆಂದು ವಾದಿಸಿದ ಎಸ್ ಐ ಟಿ ಪರ ವಕೀಲ ದಿವ್ಯರಾಜ್ ಹೆಗ್ಡೆ, ಧರ್ಮಸ್ಥಳದ ಪರ ವಕೀಲರು ಸಲ್ಲಿಸಿದ ಅರ್ಜಿ ಮತ್ತು ತಿಮರೋಡಿ ಪರ ವಕೀಲರು ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಗಳಿಗೆ ಲಿಖಿತ ಆಕ್ಷೇಪಣೆ ಮತ್ತು ವಾದ ಮಾಡಲು ಕಾಲವಕಾಶ ಕೇಳಿದ ಹಿನ್ನಲೆಯಲ್ಲಿ ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಲಾಗಿದೆ.ಜೊತೆಗೆ ಧರ್ಮಸ್ಥಳ ಕ್ಷೇತ್ರದ ಪರ ವಕೀಲರು ಕೂಡ ವಾದ ಮಂಡನೆಗೆ ಅವಕಾಶ ಕೇಳಿದರು.

- Advertisement -








