Friday, June 19, 2026
spot_imgspot_img
spot_imgspot_img

ಧರ್ಮಸ್ಥಳ: ನೂರಾರೂ ಶವ ಹೂತಿಟ್ಟ ಪ್ರಕರಣ; 6ನೇ ಪಾಯಿಂಟ್‌ನಲ್ಲಿ ಏನೆಲ್ಲ ಅವಶೇಷಗಳು ಸಿಕ್ಕಿವೆ..? ಇಲ್ಲಿದೆ ನೋಡಿ..!

- Advertisement -
- Advertisement -

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇತ್ರಾವತಿ ನದಿ ಪಕ್ಕದ ಒಡಲಲ್ಲಿ ಜೆಸಿಬಿ ಕಾರ್ಯಚರಣೆ ಮುಂದುವರಿದಿದೆ. SIT ಅಧಿಕಾರಿಗಳ ತಂಡ ಶೋಧನೆ ನಡೆಸಿದೆ. ನಿನ್ನೆ 6ನೇ ಪಾಯಿಂಟ್ ನಲ್ಲಿ 12 ಮೂಳೆಗಳು ಪತ್ತೆಯಾಗಿವೆ. ಕೈ, ಕಾಲಿನ 2 ಮೂಳೆ ಸೇರಿದಂತೆ ಇತರೆ ಸಣ್ಣ ಮೂಳೆಗಳು ಪತ್ತೆಯಾಗಿವೆ.

ತಲೆ ಬುರುಡೆಯ ಎರಡು ತುಂಡುಗಳು ಪತ್ತೆಯಾಗಿವೆ. ಮೂಳೆ, ಬುರುಡೆಯ ತುಂಡು ಸಂರಕ್ಷಿಸಿ ಎಫ್ ಎಸ್ ಎಲ್ ತಂಡ ತೆಗೆದುಕೊಂಡು ಹೋಗಿದೆ. ಇನ್ನೂ ಯಾವುದೇ ಸಾಕ್ಷ್ಯ ನಾಶವಾಗದಂತೆ ಎಸ್ ಐಟಿಯಿಂದ ಕಟ್ಟೆಚ್ಚರ ವಹಿಸಲಾಗಿದೆ. ಗುಂಡಿಯೊಳಗೆ ನೀರು ತುಂಬಿದರೆ ಸಾಕ್ಷ್ಯ ನಾಶವಾಗುವ ಆತಂಕದ ಹಿನ್ನೆಲೆಯಲ್ಲಿ 6ನೇ ಪಾಯಿಂಟ್ ಮೇಲ್ಬಾಗದಲ್ಲಿ ಶೀಟ್ ಅಳವಡಿಸಿ ಸಂರಕ್ಷಣೆ ಮಾಡಲಾಗುತ್ತಿದೆ.

ಇಂದು ಏಳನೇ ಜಾಗದಲ್ಲಿ ಉತ್ಪನನ ಆರಂಭವಾಗಿದ್ದು, ಈವರೆಗೆ ಯಾವುದೇ ಅವಶೇಷಗಳು ದೊರೆತಿಲ್ಲ ಎಂದು ತಿಳಿದುಬಂದಿದೆ. ಅವಶೇಷಗಳು ಲಭ್ಯವಾದರೆ ಸ್ಪಾಟ್ ಏಳರಲ್ಲಿ ತನಿಖೆ ಮುಂದುವರೆಯಲಿದೆ. ಇಲ್ಲವಾದರೆ ಮುಂದಿನ 8, 9, ಸ್ಪಾಟ್ ಗಳಲ್ಲಿ ಉತ್ಪನನ ಕಾರ್ಯ ನಡೆಯಲಿದೆ.

- Advertisement -

Related news

error: Content is protected !!