Monday, May 6, 2024
spot_imgspot_img
spot_imgspot_img

ಮಾಣಿ: (ಡಿ.31) ವಲಯ ಮಟ್ಟದ ಬಂಟರ ಕ್ರೀಡಾಕೂಟ ಹಾಗೂ ಬಂಟ್ವಾಳ ತಾ.ಮಟ್ಟದ ಪುರುಷರ ಮತ್ತು ಮಹಿಳೆಯರ ಹಗ್ಗಜಗ್ಗಾಟ

- Advertisement -G L Acharya panikkar
- Advertisement -

ಮಾಣಿ: ಬಂಟರ ಸಂಘ ಮಾಣಿ ವಲಯ(ರಿ) ಇದರ ವಲಯ ಮಟ್ಟದ ಬಂಟರ ಕ್ರೀಡಾಕೂಟ ಹಾಗೂ ಬಂಟ್ವಾಳ ತಾ.ಮಟ್ಟದ ಪುರುಷರ ಮತ್ತು ಮಹಿಳೆಯರ ಹಗ್ಗಜಗ್ಗಾಟವು ಡಿ.31ರಂದು ಪೆರ್ನೆ ಅಯೋಧ್ಯಾನಗರದ ಶ್ರೀರಾಮಚಂದ್ರ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ.

ಬೆಳಿಗ್ಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ಬಿಳಿಯೂರು ಮೋಟಾರ್‍ ವರ್ಕ್ಸ್‌ನ ಮಾಲಕರಾದ ಬಿ.ಸದಾಶಿವ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಂಟರ ಸಂಘ ಮಾಣಿ ವಲಯ(ರಿ)ಅಧ್ಯಕ್ಷ ಲಯನ್ ಬಿ.ಎಂ ಗಂಗಾಧರ ರೈ, ನಿಸರ್ಗ ವಡ್ಯದಗಯ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಬೆಂಗಳೂರು ಉಚ್ಚ ನ್ಯಾಯಾಲಯ ವಕೀಲರಾದ, ಪೆರ್ನೆ ಶ್ರೀರಾಮಚಂದ್ರ ಪದವಿಪೂರ್ವ ಕಾಲೇಜಿನ ಸಂಚಾಲಕ ಹರೀಶ್ ಭಂಡಾರಿ, ಸಚ್ಚಿದಾನಂದ ರೈ ಪಾಳ್ಯ, ವಿಶ್ವನಾಥ ಶೆಟ್ಟಿ ಪೆರ್ನೆ, ರಾಜೀವ ಶೆಟ್ಟಿ ಕೇದಗೆ ಪ್ರಗತಿಪರ ಕೃಷಿಕರು, ಅಂಚೆ ಇಲಾಖೆ ನಿವೃತ್ತ ಅಧಿಕಾರಿ ಚಂದ್ರಹಾಸ ಶೆಟ್ಟಿ ಸಂಪಿಗೆಕೋಡಿ ಕಳೆಂಜ, ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ ಸಂಪಿಗೆಕೋಡಿ ಕಳೆಂಜ, ರಾಜೀವಿ ಶೆಟ್ಟಿ ಅರ್ಬಿ ಬರಿಮಾರು, ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಲೆಕ್ಕ ಪರಿಶೋಧಕ ನಳಿನಾಕ್ಷಿ ಕಿರಣ್ ಶೆಟ್ಟಿ ಪೆರ್ನೆ, ನಿರ್ಮಲಾಕ್ಷಿ ಸಾಮಾನಿ ಕಡಂಬು ಪೆರ್ನೆ, ಅನಂತಾಡಿ ಬಂಟ್ರಿಂಜ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಗೀತಾ ಗಿರೀಶ್ ಶೆಟ್ಟಿ ಭಾಗವಹಿಸಲಿದ್ದಾರೆ.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಂಟರ ಸಂಘ ಮಾಣಿ ವಲಯದ ಅಧ್ಯಕ್ಷ ಲಯನ್ ಬಿ.ಎಂ.ಗಂಗಾಧರ ರೈ ನಿಸರ್ಗ ವಡ್ಯದಗಯ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾೖಕ್‌ ಉಳಿಪ್ಪಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್‍ ರೈ ಕೆ.ಎಸ್, ಬಂಟವಾಳ ತಾಲೂಕು(ರಿ.) ಬಂಟರ ಸಂಘ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ, ಮಂಗಳೂರು ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಅನುಸೂಯ ರೈ ಉರ್ದಿಲಗುತ್ತು, ಮಾಣಿ ಕರ್ನಾಟಕ ಪ್ರೌಢಶಾಲೆ ಸಂಚಾಲಕ ಕಿರಣ್ ಹೆಗ್ಡೆ, ಬಂಟವಾಳ ತಾಲೂಕು(ರಿ.) ಬಂಟರ ಸಂಘ ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ, ಪೆರ್ನೆ ಶ್ರೀರಾಮಚಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶೇಖರ ರೈ, ಬಂಟವಾಳ ತಾ.ಬಂಟರ ಸಂಘದ ಮಹಿಳಾ ವಿಭಾಗದ ಉಪಾಧ್ಯಕ್ಷರಾದ ಸಂಧ್ಯಾ ಡಿ.ರೈ, ಬಂಟರ ಸಂಘ ಬಂಟವಾಳ ಯುವ ವಿಭಾಗದ ಅಧ್ಯಕ್ಷ ನಿಶಾನ್ ಆಳ್ವ ಭಾಗವಹಿಸಲಿದ್ದಾರೆ.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಉದ್ಯಮಿ ಕಂಬಳ ಕೋಣದ ಯಜಮಾನರು ಹಾಘೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಲ|ಎಂ ಉಮೇಶ್ ಶೆಟ್ಟಿ ಮಾಣಿ ಸಾಗು ಹೊಸಮನೆ, ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಲ|ಎ. ಸುರೇಶ್ ರೈ, ಕು|ತನ್ವಿ ರೈ ಕಡೇಶಿವಾಲಯ ಕ್ರೀಡಾ ಕ್ಷೇತ್ರ, ಕು| ವರ್ಷಿಣಿ ಚಂದ್ರಹಾಸ ಶೆಟ್ಟಿ ಕ್ರೀಡಾ ಕ್ಷೇತ್ರ(ತ್ರೋಬಾಲ್), ಕು|ತನ್ವಿ ಎಸ್.ಶೆಟ್ಟಿ ಕ್ರೀಡಾ ಕ್ಷೇತ್ರ (ಅಥ್ಲೆಟಿಕ್), ಸಮಿರಾಜ್ ಆಳ್ವ ಕರಾಟೆ ಪಟು, ಕು|ಎಂ.ಧನ್ವಿ ಶೆಟ್ಟಿ ಕ್ರೀಡಾ ಕ್ಷೇತ್ರ (ತ್ರೋಬಾಲ್), ಆಯುಷ್ ಎಸ್.ಶೆಟ್ಟಿ ಕ್ರೀಡಾ ಕ್ಷೇತ್ರ(ತ್ರೋಬಾಲ್), ಆರುಷ್ ಎ.ರೈ ಕರಾಟೆ ಪಟು, ಕು|ರಿಷಿಕಾ ಸಿ.ಶೆಟ್ಟಿ ಕ್ರೀಡಾ ಕ್ಷೇತ್ರ (ತ್ರೋಬಾಲ್) ಸನ್ಮಾನ ಕಾರ್ಯಕ್ರಮ ನಡೆಯಲಿದೆ.

- Advertisement -

Related news

error: Content is protected !!