Sunday, October 6, 2024
spot_imgspot_img
spot_imgspot_img

ಚಿನ್ನ,ಬೆಳ್ಳಿ ಆಯ್ತು, ಮಾರ್ಕೆಟ್ ಗೆ ಬಂತು ಡೈಮಂಡ್ ಮಾಸ್ಕ್..!

- Advertisement -
- Advertisement -

ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಅತ್ಯಗತ್ಯ. ಹೀಗಾಗಿ ವಿವಿಧ ರೀತಿಯ ಮಾಸ್ಕ್ ಗಳು ಮಾರುಕಟ್ಟೆಗೆ ಬಂದಿವೆ. ಚಿನ್ನ, ಬೆಳ್ಳಿ ಮಾಸ್ಕ್ ಗಳನ್ನು ಮದುವೆಯಲ್ಲಿ ಧರಿಸಿರುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೊಂದು ಕಡೆ ವ್ಯಕ್ತಿಯೊಬ್ಬರು ವಧು-ವರನಿಗೆ ಡೈಮಂಡ್ ಮಾಸ್ಕ್ ಅನ್ನು ತಯಾರಿಸಿಕೊಂಡು ಹೋಗಿದ್ದಾರೆ.

ಅಂದಹಾಗೆ ಈ ಡೈಮಂಡ್ ಮಾಸ್ಕ್ ಮಾರಾಟವಾಗುತ್ತಿರುವುದು ಗುಜರಾತ್ ನ ಸೂರತ್ ನಲ್ಲಿ. ಇಲ್ಲಿನ ಆಭರಣ ಅಂಗಡಿಯೊಂದಕ್ಕೆ ವ್ಯಕ್ತಿಯೊಬ್ಬರು ಬಂದು, ನಮ್ಮ ಮನೆಯಲ್ಲಿ ಮದುವೆ ಇದೆ. ಹೀಗಾಗಿ ವಧು-ವರನಿಗೆ ವಿಶೇಷ ಮಾಸ್ಕ್ ತಯಾರಿಸಿಕೊಡಿ ಅಂದಿದ್ದಾರೆ. ಹೀಗಾಗಿ ವಿಶೇಷ ವಿನ್ಯಾಸಕರ ಬಳಿ ಈ ಡೈಮಂಡ್ ಮಾಸ್ಕ್ ಅನ್ನು ಮಾಡಿಸಲಾಗಿದೆ.

ಇದನ್ನು ಅಪ್ಪಟ ವಜ್ರ ಹಾಗೂ ಅಮೆರಿಕನ್ ಡೈಮಂಡ್ ಜತೆಗೆ ಚಿನ್ನವನ್ನು ಬಳಸಿ ತಯಾರಿಸಲಾಗಿದೆ. ಇನ್ನು ವಜ್ರದ ಮಾಸ್ಕ್ ಗಳ ಬೆಲೆ 1.5 ಲಕ್ಷ ರೂ.ಯಿಂದ 4 ಲಕ್ಷ ರೂ.ವರೆಗೆ ಇದೆ. ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಬೇಕಾಗಬಹುದು ಎಂದು ಇನ್ನೂ ಇಂತಹ ಅನೇಕ ಮಾಸ್ಕ್ ಗಳನ್ನು ತಯಾರಿಸಲಾಗಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.

- Advertisement -

Related news

error: Content is protected !!