Wednesday, April 24, 2024
spot_imgspot_img
spot_imgspot_img

ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಕ್ರಮ ವಹಿಸದಿದ್ದರೆ ವಿಎ, ಪಿಡಿಒಗಳ ವಿರುದ್ಧ ಕ್ರಮ: ದ.ಕ ಜಿಲ್ಲಾಧಿಕಾರಿ ಎಚ್ಚರಿಕೆ

- Advertisement -G L Acharya panikkar
- Advertisement -

ದಕ್ಷಿಣ ಕನ್ನಡ: ಬಂಟ್ವಾಳ ತಾಲೂಕಿನ ಬಾಳೆಪುಣಿ, ಕೈರಂಗಳ, ಪಜೀರು ಕಡೆಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಕೆಂಪು ಕಲ್ಲು ಗಣಿಗಾರಿಕೆ ನಡೆಸುವ ಜಾಗ ಅದು ಸರ್ಕಾರಿ ಜಾಗ. ಈ ಹಿಂದೆ ಸರ್ಕಾರ ನಿವೇಶನಕ್ಕಾಗಿ ಮಂಜೂರು ಮಾಡಲಾಗಿತ್ತು. ನಿವೇಶನಕ್ಕೆ ಯೋಗ್ಯವಲ್ಲ ಎಂದು ಆ ಜಾಗದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಗಣಿ ಇಲಾಖೆ ಅನುಮತಿ ಮೇರೆಗೆ ಗಣಿಗಾರಿಕೆ ನಡೆಸಲಾಗಿದೆ ಎಂದು ಉತ್ತರ ಬಂದಿದೆ. ಡಿ.ಡಿ ಮೈನ್ಸ್ ಅಧಿಕಾರಿಗಳ ಜೊತೆ ಸೇರಿ ನಾನು ತನಿಖೆ ನಡೆಸಲಾಗುವುದು ಎಂದರು.

ಇನ್ನು ನಿಜವಾಗಿಯೂ ನಿವೇಶನಕ್ಕೆ ಯೋಗ್ಯವಾದ ಜಾಗನಾ ಎಂಬುದರ ಬಗ್ಗೆ ತನಿಖೆಯಾಗಲಿದೆ. ಆ ಜಾಗದಲ್ಲಿ ಖನಿಜ ವಸ್ತುಗಳ ಪತ್ತೆಯಾಗಿದೆಯೆ…ಇಲ್ಲವೋ ಎಂಬುದರ ಬಗ್ಗೆ ತಾಂತ್ರಿಕ ವರದಿಗಳ ಪರಿಶೀಲನೆ ಮಾಡಲಾಗಿದೆ. ತಾಂತ್ರಿಕ ವರದಿಗಳಲ್ಲಿ ಯಾವುದನ್ನು ದಾಖಲು ಮಾಡಿಲ್ಲ. ಅಭಿವೃದ್ಧಿ ಅಧಿಕಾರಿಗಳು ಅಥವಾ ಗ್ರಾಮ ಲೆಕ್ಕ ಅಧಿಕಾರಿ ಇದರಲ್ಲಿ ಭಾಗಿಯಾಗಿದ್ರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

- Advertisement -

Related news

error: Content is protected !!