- Advertisement -
- Advertisement -
ಬೆಂಗಳೂರು: ಕೋಗಿಲು ಬಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೀಸಲಾದ ಸರಕಾರಿ ಜಾಗದಲ್ಲಿ ನಡೆದ ಅನಧಿಕೃತ ನಿರ್ಮಾಣಗಳ ತೆರವು ಕಾರ್ಯ ಸ್ಥಳಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಇದು ವಾಸಕ್ಕೆ ಅಯೋಗ್ಯ ಪ್ರದೇಶವಾಗಿರುವುದರಿಂದ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ತೆರವು ಅಗತ್ಯವಾಗಿದೆ ಎಂದರು.
ಒತ್ತುವರಿಗಿಂತ ಮುನ್ನ ಮಾಹಿತಿ ನೀಡಲಾಗಿತ್ತು. ಸೂರು ಕಳೆದುಕೊಂಡ ಅರ್ಹ ಬಡವರ ಕುರಿತು ಪರಿಶೀಲನೆ ನಡೆಯುತ್ತಿದೆ; ಅನ್ಯಾಯವಾದರೆ ಸರಕಾರಿ ಯೋಜನೆಯಡಿ ಮನೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಜನರಿಂದ ಹಣ ಪಡೆದು ಅಕ್ರಮವಾಗಿ ಗುಡಿಸಲು ಕಟ್ಟಲು ಅವಕಾಶ ಮಾಡಿದವರ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ವಿಚಾರದಲ್ಲಿ ರಾಜಕೀಯ ಮಾಡುವ ಆರೋಪವನ್ನು ತಳ್ಳಿ ಹಾಕಿದ ಡಿಸಿಎಂ, ಬೆಂಗಳೂರು ನಗರದಲ್ಲಿ ಸರಕಾರಿ ಜಾಗ ರಕ್ಷಣೆ ನಿರಂತರ ಪ್ರಕ್ರಿಯೆಯಾಗಿದೆ ಎಂದು ಸ್ಪಷ್ಟಪಡಿಸಿದರು.
- Advertisement -








