Tuesday, September 1, 2026
spot_imgspot_img
spot_imgspot_img

ಸೆ.6 ರಿಂದ 6-8ನೇ ತರಗತಿ ಪ್ರಾರಂಭ; ದಕ್ಷಿಣ ಕನ್ನಡ ಸೇರಿ ಕೆಲ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರಿಕೆ, ಮದುವೆ ಸಮಾರಂಭಗಳಿಗೆ ಹೊಸ ರೂಲ್ಸ್ ಜಾರಿ

- Advertisement -
- Advertisement -

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್​​ ಬೊಮ್ಮಾಯಿ ನೇತೃತ್ವದಲ್ಲಿ ಕೊರೋನಾ ಸಂಬಂಧ ತಜ್ಞರೊಂದಿಗೆ ಸಭೆ ನಡೆಸಲಾಯ್ತು. ಸಭೆ ಬಳಿಕ ಮಾತಾಡಿದ ಸಚಿವ ಆರ್​​. ಅಶೋಕ್​​, ಕೇರಳದಲ್ಲಿ ಕೊರೋನಾ ಹೆಚ್ಚಾಗುತ್ತಿದೆ. ಹೀಗಾಗಿ ಕೊರೋನಾ ರಾಜ್ಯಕ್ಕೆ ಕೇರಳದಿಂದ ಹರಡದಂತೆ ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎಂದರು.

ಉಡುಪಿ, ಕೋಲಾರ, ಚಿಕ್ಕಮಗಳೂರು, ಹಾಸನ, ಮೈಸೂರು, ಶಿವಮೊಗ್ಗ, ಕಲಬುರ್ಗಿ 1.5 ಪಾಸಿಟಿವ್​​ ರೇಟ್​ ಕಡಿಮೆಯಾಗಿದೆ. ಹೀಗಾಗಿ ಇಲ್ಲಿನ ಲಾಕ್ಡೌನ್​​​ ಸಡಿಲಗೊಳಿಸುತ್ತೇವೆ.

ಕೊಡಗು, ಹಾಸನ, ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ಎಲ್ಲಾ ಕಡೆಯೂ ವಾರಾಂತ್ಯ ಕರ್ಫ್ಯೂ ಸಡಿಲ ಮಾಡಲಿದ್ದೇವೆ ಎಂದು ಹೇಳಿದರು. ದಕ್ಷಿಣ ಕನ್ನಡ, ಕೊಡಗು 2 ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿರದೆ ಎಂದರು.

ಮದುವೆ ಸಮಾರಂಭಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಶೇ.50ರಷ್ಟು ಅಂದರೆ 400 ಜನರನ್ನು ಸೇರಿಸಿ ಮದುವೆ ಮಾಡಬಹುದು. ಶೇ. 2 ಪಾಸಿಟಿವ್​ ದರ ಕಡಿಮೆ ಇರುವ ತಾಲೂಕಿನಲ್ಲಿ 6,7,8 ತರಗತಿಗಳನ್ನು ಶುರು ಮಾಡಲಾಗಿದೆ. ಸೆಪ್ಟೆಂಬರ್​​ 6ನೇ ತಾರೀಕಿನಿಂದ ಕೋವಿಡ್​​​ ಮಾರ್ಗ ಸೂಚಿಗಳ ಪಾಲನೆಯೊಂದಿಗೆ ತರಗತಿಗಳು ಆರಂಭಿಸಲು ಅನುಮತಿ ನೀಡಲಿದ್ದೇವೆ ಎಂದು ಮಾಹಿತಿ ನೀಡಿದರು.

- Advertisement -

Related news

error: Content is protected !!