Wednesday, May 8, 2024
spot_imgspot_img
spot_imgspot_img

ಖಾಕಿ ತೊಟ್ಟವರಿಗೆ ಕಚ್ಚುವ ತರಬೇತಿ; ಡ್ರಗ್ಸ್‌ ಮಾರಾಟಗಾರನ ಮನೆಗೆ ದಾಳಿ ನಡೆಸಿದ ಪೊಲೀಸರಿಗೆ ನಾಯಿಗಳ ಕಾಟ

- Advertisement -G L Acharya panikkar
- Advertisement -
vtv vitla

ವ್ಯಕ್ತಿಯೊಬ್ಬ ಡ್ರಗ್ಸ್ ಮಾರಾಟ ಮಾಡುತ್ತಿದ್ದಾನೆ ಎಂಬುದನ್ನು ಅರಿತ ಪೊಲೀಸರು ಆತನ ಮನೆ ಮೇಲೆ ದಾಳಿ ಮಾಡಲು ಹೋದಾಗ ನಾಯಿಗಳು ದಾಳಿ ನಡೆಸಿದ ಪ್ರಸಂಗವೊಂದು ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.

ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಪೊಲೀಸರು ಶಂಕಿತನ ಮನೆಗೆ ಪರಿಶೀಲನೆಗೆ ತೆರಳಿದ್ದಾರೆ. ಈ ವೇಳೆ ಒಂದಷ್ಟು ನಾಯಿಗಳು ಕಚ್ಚಲು ಬಂದವು. ಆಗ ಪೊಲೀಸರು ನಾಯಿಗಳಿಂದ ಪಾರಾಗಲು ಯತ್ನಿಸಿದರೆ, ಇತ್ತ ಆರೋಪಿಗಳು ತಪ್ಪಿಸಿಕೊಂಡು ಓಡಿದ್ದಾರೆ.

ಈ ನಡುವೆಯೂ ನಾಯಿಗಳನ್ನು ಎದುರಿಸಿ ವ್ಯಕ್ತಿಯ ಮನೆಯಿಂದ 17 ಕಿ.ಗ್ರಾಂಗಳಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಕಿಯನ್ನು ನೋಡಿ ಕಚ್ಚುವ ತರಬೇತಿಯನ್ನು ನಾಯಿಗಳಿಗೆ ಆರೋಪಿಯು ನೀಡಿದ್ದನು. ಬಿಎಸ್‍ಎಫ್‍ನಿಂದ ನಿವೃತ್ತನಾದ ವ್ಯಕ್ತಿಯಿಂದ ನಾಯಿ ನಿರ್ವಹಣೆಯ ಕುರಿತು ತರಬೇತಿ ಪಡೆದಿದ್ದನು. ಆದರೆ ಖಾಕಿ ಧರಿಸಿದವರನ್ನೇ ನಾಯಿಗಳು ಕಚ್ಚುವಂತೆ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಅವನು ಉತ್ತರಿಸಿಲ್ಲ. ಶ್ವಾನ ತರಬೇತುದಾರನ ಸೋಗಿನಲ್ಲಿ ಆರೋಪಿಗಳು ಮಾದಕ ವಸ್ತು ಮಾರಾಟ ಮಾಡುತ್ತಿದ್ದು, ಸ್ಥಳದಿಂದ 17 ಕೆಜಿಗೂ ಅಧಿಕ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು. ಅಲ್ಲದೆ ತಾನು ನೆಲೆಸಿದ್ದ ಪ್ರದೇಶದಲ್ಲಿ ಎಲ್ಲರಿಗೂ ನಾಯಿ ತರಬೇತುದಾರ ಎಂದೇ ಪರಿಚಿತನಾಗಿದ್ದನು. ಆದ್ದರಿಂದ ಜನರು ದಿನಕ್ಕೆ 1,000 ರೂ. ದರದಲ್ಲಿ ತಮ್ಮ ನಾಯಿಗಳನ್ನು ಅವನೊಂದಿಗೆ ಬಿಡುತ್ತಿದ್ದರು. ಸದ್ಯ ಸುಮಾರು 13 ನಾಯಿಗಳು ಅಲ್ಲಿದ್ದು, ಅವುಗಳ ಮಾಲೀಕರನ್ನು ಗುರುತಿಸಿದ ಬಳಿಕ ಹಸ್ತಾಂತರಿಸಲಾಗುವುದು. ಅಲ್ಲದೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದರು.

ಈ ದಂಧೆಯಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ಕಂಡುಹಿಡಿಯಬೇಕಾಷ್ಟೇ ಎಂದು ಅಧಿಕಾರಿ ತಿಳಿಸಿದ್ದಾರೆ.

- Advertisement -

Related news

error: Content is protected !!