Saturday, June 6, 2026
spot_imgspot_img
spot_imgspot_img

ಮಂಗಳೂರು: ಕೋಪಕ್ಕೆ ಕೊಯ್ದ ಮೂಗು ಮತ್ತೇ ಬಂದೀತೇ..! ತಂದೆ ಹಾರಿಸಿದ ಗುಂಡು ಮಗನನ್ನೇ ಬಲಿಪಡೆಯಿತು; ಅಂಗಾಂಗ ದಾನಕ್ಕೆ ನಿರ್ಧಾರ

- Advertisement -
- Advertisement -

ಮಂಗಳೂರು: ನಗರದ ಮೋರ್ಗನ್ ಗೇಟ್ ಬಳಿ ಶೂಟೌಟ್ ನಡೆದಿದ್ದು, ಉದ್ಯಮಿಯೊಬ್ಬರು ಹಾರಿಸಿದ ಗುಂಡು ತನ್ನ ಮಗನಿಗೇ ಆಕಸ್ಮಿಕವಾಗಿ ಬಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ ಮಗ ಅಸುನೀಗಿದ್ದಾನೆ.

ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಪ್ರೈ. ಲಿ. ಇದರ ಮೋರ್ಗನ್ ಗೇಟ್ ಕಚೇರಿಯಲ್ಲಿ ಘಟನೆ ನಡೆದಿತ್ತು. ಕೆಲಸದಾಳು ಸಂಬಳ ಕೇಳಿದ್ದಕ್ಕೆ ಕೋಪಗೊಂಡ ಮಾಲಕ ರಾಜೇಶ್ ಪ್ರಭು ಸಿಟ್ಟುಗೊಂಡಿದ್ದಾರೆ. ಈ ಮಧ್ಯೆ ಇಬ್ಬರ ನಡುವೆ ಜಟಾಪಟಿ ನಡೆದಿದೆ.

ರಾಜೇಶ್ ಪ್ರಭು ಸಿಟ್ಟಿನಿಂದ ತನ್ನ ಪಿಸ್ತೂಲ್ ತೆಗೆದು ಗುಂಡು ಹಾರಿಸಿದ್ದು ಅದು ತಪ್ಪಿ ತನ್ನ ಮಗನ ಮೇಲೆ ಬಿದ್ದಿದೆ. ಮಗ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಸುಧೀಂದ್ರನ ಹಣೆಗೆ ಗುಂಡು ಬಿದ್ದಿದ್ದು ಗಾಯಗೊಂಡಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದರು ಚಿಂತಾಜನಕ ಸ್ಥಿತಿಯಲ್ಲಿದ್ದ ಸುಧೀಂದ್ರ ಅಸುನೀಗಿದ್ದಾನೆ. ಮಗನ ಅಂಗಾಂಗವನ್ನು ದಾನ ಮಾಡಲು ಪೋಷಕರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!