Saturday, May 18, 2024
spot_imgspot_img
spot_imgspot_img

*1 ಕೋಟಿಗೆ ಎರಡು ತಲೆಯ ಹಾವು ಮಾರಾಟ*

- Advertisement -G L Acharya panikkar
- Advertisement -

ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಆನಂದಪುರದಲ್ಲಿ ಎರಡು ತಲೆ ಹಾವು ಎಂದು ಕರೆಯಲಾಗುವ ರೆಡ್​ ಸ್ಯಾಂಡ್​ ಬೋವಾ ಹಾವನ್ನು ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಮೈಸೂರಿನ ಶಾಂತಿನಗರದ ನಿವಾಸಿ ಸೈಯದ್ ಮೋಮಿನ್ (22) ಬಂಧಿತ ಆರೋಪಿ. ಸೈಯದ್ ಮೋಮಿನ್, ಆನಂದಪುರ ಬಸ್ ನಿಲ್ದಾಣದಲ್ಲಿ ಸುಮಾರು ₹1 ಕೋಟಿಗೆ ಹಾವು ಮಾರಾಟಕ್ಕೆ ಯತ್ನಿಸುತ್ತಿದ್ದ ಎನ್ನಲಾಗಿದೆ.

ಇದರಿಂದ ಅನುಮಾನಗೊಂಡ ಅರಣ್ಯ ಸಂಚಾರಿ ದಳ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬ್ಯಾಗ್​​ನಲ್ಲಿದ್ದ ಹಾವನ್ನು ವಶಕ್ಕೆ ಪಡೆದಿದ್ದಾರೆ.

  ರೆಡ್​ ಸ್ಯಾಂಡ್​ ಬೋವಾ ಹಾವಿನ ಬಾಲವೂ ತಲೆಯಂತೆ ಕಾಣುವುದರಿಂದ ಇವನ್ನ ಸಾಮಾನ್ಯವಾಗಿ ಎರಡು ತಲೆಯ ಹಾವು ಎಂದು ಕರೆಯಲಾಗುತ್ತೆ.

- Advertisement -

Related news

error: Content is protected !!