- Advertisement -
- Advertisement -
ಮಂಗಳೂರು: ಏಪ್ರಿಲ್ 12 ರಂದು ನಡೆದ ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ ಎನ್ನುವ ವಿಶೇಷ ಕಾರ್ಯಕ್ರಮದಲ್ಲಿ ಕರಾವಳಿಯ ಹೆಸರಾಂತ ಗಾಯಕ ಮನೀಶ್ ಕುತ್ತಾರ್ ಮತ್ತು ಬಳಗದವರಿಂದ ಭಕ್ತಿಗೀತೆ ಕಾರ್ಯಕ್ರಮ ನಡೆಯಿತು.

ಕನ್ನಡ ಮತ್ತು ತುಳು ಹಲವಾರು ಭಕ್ತಿಗೀತೆಗಳಿಗೆ ಸಾಹಿತ್ಯದ ಜೊತೆಗೆ ಗಾಯನ ಮಾಡಿ ಕರಾವಳಿಗರ ಮನಸ್ಸನ್ನು ಗೆದ್ದಿರುವ ಹೆಸರಾಮತ ಕಲಾವಿದ ಮನೀಶ್ ಕುತ್ತಾರ್ ಮತ್ತು ಬಳಗದವರಿಂದ ಭಕ್ತಿಗೀತೆ ಕಾರ್ಯಕ್ರಮ ನಡೆಯಿತು. ಈ ವೇಳೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಆಗಮಿಸಿ, ಕಾರ್ಯಕ್ರಮ ವೀಕ್ಷಿಸಿ ಕೊರಗಜ್ಜ ಸ್ವಾಮಿಯ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾದರು.
- Advertisement -








