ಮಂಗಳೂರು:- ಹೈಸ್ಕೂಲ್‌ನಲ್ಲಿ ಓದುತ್ತಿರುವಾಗಲೇ ತನಗೆ ಸಿಗುತ್ತಿದ್ದ ಪಾಕೆಟ್ ಮಣಿ ಬಳಸಿ ಆನ್‌ಲೈನ್‌ನ ಮೂಲಕ ಪಾರ್ಟ್‌ಗಳನ್ನು ತರಿಸಿ ಒಂದು ವರ್ಷದ ಹಿಂದೆ ತಾನೇ ಖುದ್ದಾಗಿ ಡ್ರೋನ್ ತಯಾರಿಸಿದ ಮಂಗಳೂರಿನ ಯುವ ಪ್ರತಿಭೆ “ಶಮಂತ್ ಆಚಾರ್ಯ”.
ಮಂಗಳೂರಿನ “ಶಮಂತ್” ತಯಾರಿಸಿದ ಡ್ರೋನ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಪಿವಿಸಿ ಪೈಪ್‌ನಂತಹ ಸಾಮಾನ್ಯ ವಸ್ತುಗಳನ್ನು ಬಳಸಲಾಗಿದೆ, ಕೆಲ ವರ್ಷಗಳಿಂದ ಹಲವಾರು ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿತ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ತನ್ನ ಕಿರಿಯ ವಯಸ್ಸಿನಲ್ಲೇ ಹಲವಾರು ವಿಶೇಷ ಪ್ರಾಜೆಕ್ಟ್‌ಗಳನ್ನು ಮಾಡಿರುವ ಶಮಂತ್‌ನಂತಹ ನೈಜ ಪ್ರತಿಭೆಗಳಿಗೆ ಸರಕಾರದಿಂದ ಬರುವಂತಹ ಅನುದಾನ ಸಿಕ್ಕರೆ ಅವರ ಪ್ರತಿಭೆಗೆ ಮತ್ತಷ್ಟು ಬಲ ಸಿಗಲಿದೆ.
ಈ ಯುವ ಪ್ರತಿಭೆಗೆ ಆಲೋಚನಾ ಶಕ್ತಿ ,ಹಾಗೂ ಕಿರಿಯ ವಯಸ್ಸಿನಲ್ಲೇ ಇಂತವರಿಗೆ ಸರಿಯಾದ ಪ್ರೋತ್ಸಾಹ ಸಿಕ್ಕರೆ ಕಾಲೇಜಿಗೆ ಬರವಷ್ಟರ ಹೊತ್ತಿಗೆ ಸಾಲು ಸಾಲು ಸಾಧನೆಗಳನ್ನು ಇವರು ಮಾಡುವುದು ಖಂಡಿತ.ನಮ್ಮ ಊರಿನಲ್ಲಿರುವ ಇಂತಹ ನೈಜ ಕಿರಿಯ ಪ್ರತಿಭೆಗಳನ್ನು ಗುರುತಿಸಿ ಸಮಾಜಕ್ಕೆ ಗುರುತಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.