Monday, May 20, 2024
spot_imgspot_img
spot_imgspot_img

ಡ್ರಗ್ಸ್​ ಪಾರ್ಟಿ ಪ್ರಕರಣ​​; ಶಾರುಖ್​​​​ ಖಾನ್​​ ಪುತ್ರ ಆರ್ಯನ್​​ಗೆ ಮತ್ತೆ 3 ದಿನ ಎನ್​​ಸಿಬಿ ಕಸ್ಟಡಿ

- Advertisement -G L Acharya panikkar
- Advertisement -

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ ಆರೋಪದ ಮೇರೆಗೆ ಬಂಧಿಸಲಾಗಿರುವ ಬಾಲಿವುಡ್​​ ನಟ ಶಾರುಖ್ ಖಾನ್ ಪುತ್ರ ಆರ್ಯನ್​​ಗೆ ಮತ್ತೆ ಮೂರು ದಿನ ಎನ್​​ಸಿಬಿ ಪೊಲೀಸ್​ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.

ಇನ್ನು, ಎನ್​​ಸಿಬಿ ಪೊಲೀಸರು ಆರ್ಯನ್​​ನನ್ನು ಕಸ್ಟಡಿಗೆ ನೀಡುವಂತೆ ವಾದ ಮಂಡಿಸಿದ್ದರು. ಆರ್ಯನ್​​ ಪರ ವಕೀಲ ಸತೀಶ್​​ ಮಾನ್​ಶಿಂಧೆ ಜಾಮೀನು ನೀಡಿ ಎಂದು ವಾದಿಸಿದ್ದರು. ಕೊನೆಗೂ ಸುಮಾರು ಮೂರು ಗಂಟೆಗಳ ವಾದ-ಪ್ರತಿವಾದ ಆಲಿಸಿದ ಕೋರ್ಟ್​ ಅಕ್ಟೋಬರ್​​​ 7ನೇ ತಾರೀಕಿನವರೆಗೂ ಎನ್​ಸಿಬಿ ಕಸ್ಟಡಿಗೆ ಕೊಟ್ಟಿದೆ.

ಎನ್​ಸಿಬಿ ಪರ ವಕೀಲರು ಏನೆಲ್ಲ ವಾದ ಮಂಡಿಸಿದ್ದರು?

  • ಆರ್ಯನ್ ಖಾನ್ ಕಸ್ಟಡಿಗೆ ಕೇಳಿ ಎನ್​ಸಿಬಿ ವಾದ ಮಂಡನೆ
  • ಯಾಕೆ ಆರ್ಯನ್ ಕಸ್ಟಡಿ ಅವಶ್ಯ ಎಂದು ಹೇಳಿದ ಎನ್​ಸಿಬಿ
  • ಆರ್ಯನ್ ಮೊಬೈಲ್​ನಲ್ಲಿ ಆಘಾತಕಾರಿ ಅಂಶಗಳು ಪತ್ತೆ
  • ಫೋಟೋ ರೂಪದಲ್ಲಿ ಇನ್​ಕ್ರಿಮಿನೇಟಿಂಗ್ ಮಾಹಿತಿ ಲಭ್ಯ
  • ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್​​ ಪಡೆಯುವುದರ ಬಗ್ಗೆಯೂ ಮಾತು
  • ಬೇರೆಯವರಿಗೆ ಹಂಚುವುದಕ್ಕಾಗಿ ಡ್ರಗ್ಸ್​ ಪಡೆಯುವ ಮಾತು
  • ರಿಯಾ ಚಕ್ರವರ್ತಿ ಪ್ರಕರಣ ಉಲ್ಲೇಖಿಸಿದ ಎನ್​ಸಿಬಿ ವಕೀಲ
  • ಆ ಪ್ರಕರಣ ಆದೇಶದ ಪ್ರಕಾರ ಕೂಡ ಇದು ಬೇಲು ರಹಿತ ಕೇಸ್
  • ಎನ್​​ಡಿಪಿಎಸ್ ಆ್ಯಕ್ಟ್ ಅಡಿಯಲ್ಲಿ ಇದು ನಾನ್-ಬೇಲೇಬಲ್ ಅಫೆನ್ಸ್
  • ಡ್ರಗ್ಸ್​​​​ಗಾಗಿ ಯಾವ ರೀತಿ ಹಣ ಪಾವತಿಸಬೇಕು ಅನ್ನೋದ್ರ ಬಗ್ಗೆ ಚರ್ಚೆ
  • ಈ ವೇಳೆ ಹಲವು ಕೋಡ್​ ನೇಮ್​ಗಳನ್ನು ಬಳಿಸಿರುವ ಆರ್ಯನ್
  • ಆರ್ಯನ್​​ ಸೇರಿ ಮೂವರೂ ಡ್ರಗ್ಸ್ ಜಾಲದ ಭಾಗವಾಗಿದ್ದಾರೆ.
  • ಎನ್​ಡಿಪಿಎಸ್ ಕಾಯ್ದೆ ಉದ್ದೇಶ ಡ್ರಗ್ಸ್​​ಗೆ ಕಡಿವಾಣ ಹಾಕಬೇಕು. ಹೀಗಾಗಬೇಕಾದರೆ ನಾವು ಪ್ರಕರಣದ ಬೇರಿಗೆ ಹೋಗಬೇಕು. ಹಣ ಹೇಗೆ ವರ್ಗಾವಣೆ ಆಗುತ್ತೆ? ಯಾರು ಡ್ರಗ್ಸ್ ಕೊಡ್ತಾರೆ? ಈ ಎಲ್ಲ ವಿವರಗಳನ್ನು ನಾವು ಪತ್ತೆ ಹಚ್ಚುವ ಅವಶ್ಯಕತೆ ಇದೆ ಹೀಗಾಗಿ ಆರೋಪಿಗಳನ್ನ ಎನ್​ಸಿಬಿ ಕಸ್ಡಡಿಗೆ ನೀಡಿ ಅಂತ ಮನವಿ
driving
- Advertisement -

Related news

error: Content is protected !!