Sunday, June 7, 2026
spot_imgspot_img
spot_imgspot_img

ಕುಡಿದ ಮತ್ತಿನಲ್ಲಿ ವಾಟರ್ ಟ್ಯಾಂಕರ್ ಹರಿಸಿದ ಚಾಲಕ; ಬಾಲಕ ಸಾವು

- Advertisement -
- Advertisement -

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು ಎಂಬ ನಿಯಮವಿದ್ದರೂ ಇಲ್ಲೊಬ್ಬ ವಾಟರ್‌ ಟ್ಯಾಂಕರ್‌ ಅಳವಡಿಸಿದ ಟ್ರ್ಯಾಕ್ಟರ್‌ ಚಾಲಕ ಕುಡಿದ ಮತ್ತಿನಲ್ಲಿ ಟ್ರ್ಯಾಕ್ಟರ್‌ ಚಾಲನೆ ಮಾಡಿದ್ದಲ್ಲದೇ ಬಾಲಕನ ಮೇಲೆ ಟ್ಯಾಂಕರ್‌ ಹರಿಸಿ ಬಾಲಕನ ಸಾವಿಗೆ ಕಾರಣವಾದ ಘಟನೆ ಬೆಂಗಳೂರಿನ ಆನೆಕಲ್‌ನಲ್ಲಿ ನಡೆದಿದೆ.

ಬೇಸಿಗೆಯ ಹಿನ್ನೆಯಲ್ಲಿ ಮನೆಗಳಿಗೆ ನೀರು ಸರಬರಾಜು ಮಾಡುವುದಕ್ಕೆ ವಾಟರ್ ಟ್ಯಾಂಕರ್‌ಗಳ ಹಾವಳಿ ಹೆಚ್ಚಾಗಿರುತ್ತದೆ. ಪ್ರತಿನಿತ್ಯ ಟ್ಯಾಂಕರ್‌ ನೀರು ಸರಬರಾಜು ಮಾಡಲು ನಾಮುಂದು- ತಾಮುಂದು ಎಂದು ಪೈಪೋಟಿಗೆ ಬಿದ್ದು ನೀರು ಸರಬರಾಜು ಮಾಡುವ ಟ್ಯಾಂಕರ್‌ಗಳು ಮನೆಗಳ ಮುಂದೆ ನಿಲ್ಲಿಸಿರುವ ವಾಹಗಳಿಗೆ ಹಾನಿಗೊಳಿಸುತ್ತಿದ್ದವು. ಆದರೆ, ಇಂದು ಟ್ಯಾಂಕರ್‌ ಚಾಲಕರ ಆರ್ಭಟಕ್ಕೆ ಮಗು ಬಲಿಯಾಗಿದೆ.

ಇನ್ನು ವಾಟರ್‌ ಟ್ಯಾಂಕರ್‌ ಮಗುವಿನ ಮೇಲೆ ಹರಿಸಿದ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ನಡೆದ ನಂತರ ಪೋಷಕರು ಬಾಲಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಗೆ ಸೇರಿಸುವ ಮುನ್ನವೇ ಬಾಲಕ ಮೃತಪಟ್ಟಿದ್ದನು. ಇನ್ನೇನು ಎರಡು ದಿನದಲ್ಲಿ ಶಾಲೆಗೆ ಹೋಗಬೇಕಿದ್ದ ಬಾಲಕ ಈಗ ಸಾವಿನ ಮನೆಗೆ ಹೋಗಿದ್ದಾನೆ. ಈ ಘಟನೆಯಿಂದ ಬಾಲಕನ ಪೋಷಕರ ಆಕ್ರಂದನ ಮುಗಿಟಲು ಬಿಟ್ಟಿತ್ತು. ಮದ್ಯ ಸೇವಿಸಿ ಟ್ರ್ಯಾಕ್ಟರ್‌ ಚಾಲನೆ ಮಾಡಲು ಅವಕಾಶ ನೀಡಿದ್ದಕ್ಕೆ ಮಾಲೀಕರಿಗೆ ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಅಪಘಾತ ಮಾಡಿ ಸ್ಥಳದಿಂದ ನಾಪತ್ತೆ ಆಗಿರುವ ಟ್ರ್ಯಾಕ್ಟರ್‌ ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

Related news

error: Content is protected !!