Tuesday, July 21, 2026
spot_imgspot_img
spot_imgspot_img

ಅಹಮದಾಬಾದ್‌ನಲ್ಲಿ ವೃದ್ಧೆಯ ಹತ್ಯೆ!

- Advertisement -
- Advertisement -

ಕೈಕಾಲು ಕಟ್ಟಿ ಕೊಲೆ ಮಾಡಿ ಚಿನ್ನ–ನಗದು ದೋಚಿದ ದುಷ್ಕರ್ಮಿಗಳು

ಅಹಮದಾಬಾದ್: ಅಹಮದಾಬಾದ್‌ನ ಕುಬೇರ್‌ನಗರ ಪ್ರದೇಶದಲ್ಲಿ 65 ವರ್ಷದ ವೃದ್ಧೆಯೊಬ್ಬರನ್ನು ಕೈಕಾಲು ಕಟ್ಟಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಭಾರತಿ ಬಜರಂಗ್ (65) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಅವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಬುಧವಾರ ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಮನೆ ಕೆಲಸದವರು ಮನೆಗೆ ಬಂದಾಗ ಘಟನೆ ಪತ್ತೆಯಾಗಿದೆ. ಮನೆಯ ಒಳಗಿನಿಂದ ಬಾಗಿಲು ಹಾಕಿದ್ದರಿಂದ ಅನುಮಾನಗೊಂಡ ಅವರು ಕಿಟಕಿಯಿಂದ ಒಳಗೆ ನೋಡಿದಾಗ ವೃದ್ಧೆ ನೆಲದ ಮೇಲೆ ಬಿದ್ದಿರುವುದು ಗಮನಕ್ಕೆ ಬಂದಿದೆ.ಮೃತರ ಕೈಕಾಲುಗಳನ್ನು ಬಟ್ಟೆಯಿಂದ ಕಟ್ಟಲಾಗಿದ್ದು, ತಲೆಯ ಬಳಿ ರಕ್ತದ ಕಲೆಗಳಿರುವ ದಿಂಬು ಪತ್ತೆಯಾಗಿದೆ. ಉಸಿರುಗಟ್ಟಿಸುವ ಮೂಲಕ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಮನೆಯಲ್ಲಿದ್ದ ಸುಮಾರು 1.5 ಲಕ್ಷ ರೂ. ಮೌಲ್ಯದ ಚಿನ್ನದ ಸರ ಹಾಗೂ ಓಲೆಗಳು ಮತ್ತು ಸುಮಾರು 1 ಲಕ್ಷ ರೂ. ನಗದು ಕಳುವಾಗಿರುವುದು ಕಂಡುಬಂದಿದ್ದು, ಒಟ್ಟು ಸುಮಾರು 2.5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದುಷ್ಕರ್ಮಿಗಳು ದೋಚಿರುವ ಸಾಧ್ಯತೆ ಇದೆ.ಈ ಕುರಿತು ಸರ್ದಾರನಗರ ಪೊಲೀಸ್ ಠಾಣೆಯಲ್ಲಿ ಹತ್ಯೆ ಹಾಗೂ ದರೋಡೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪರಿಚಯಸ್ಥರೇ ಈ ಕೃತ್ಯ ಎಸಗಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!