Saturday, September 12, 2026
spot_imgspot_img
spot_imgspot_img

ಮತಪೆಟ್ಟಿಗೆ ತರುತ್ತಿದ್ದ ಬಸ್ ಅಪಘಾತ: ಹತ್ತಕ್ಕೂ ಹೆಚ್ಚು ಅಧಿಕಾರಿಗಳಿಗೆ ಗಾಯ!!

- Advertisement -
- Advertisement -

ವಿಜಯಪುರ: ಮತ ಪೆಟ್ಟಿಗೆಗಳನ್ನು ಹೊತ್ತು ತರುತ್ತಿದ್ದ ಬಸ್ ಜಿಲ್ಲೆಯ ಮುದ್ದೇಬಿಹಾಳ ಬಳಿ ಅಪಘಾತಕ್ಕೀಡಾಗಿದ್ದು 10ಕ್ಕೂ ಹೆಚ್ಚು ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ಗಾಯಗೊಂಡಿದ್ದಾರೆ.

ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಪಂಚಾಯತಿ ಚುನಾವಣೆ ಮುಗಿಸಿ ತಾಲ್ಲೂಕಿನ ಹಡಲಗೇರಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಚುನಾವಣೆ ಬಸ್ ಹಾಗೂ ಟಿಪ್ಪರ ನಡುವೆ ಮುಖಾಮುಖಿ ಡಿಕ್ಕಿಯಾಗಿವೆ. ಮುದ್ದೇಬಿಹಾಳ ತಾಲೂಕಿನ ಹುಲ್ಲೂರು, ಕೊಪ್ಪ ತಾಂಡಾ, ಕೊಪ್ಪ, ಸಿದ್ದಾಪುರ ಗ್ರಾಮದ ಮತಗಟ್ಟೆಯ ಡಬ್ಬಿಯನ್ನು ಬಸ್ ಹೊತ್ತು ತರುತ್ತಿತ್ತು.

ಅಪಘಾತದಲ್ಲಿ ಗಾಯಾಳುಗಳಾಗಿರುವ ಅಧಿಕಾರಿಗಳನ್ನು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದ್ದೇಬಿಹಾಳ ತಹಶೀಲ್ದಾರ್ ಆಸ್ಪತ್ರೆಗೆ ಭೇಟಿ ನೀಡಿದರು.

- Advertisement -

Related news

error: Content is protected !!