Wednesday, July 22, 2026
spot_imgspot_img
spot_imgspot_img

ನಮ್ಮ ಜನರ ಇಂಧನ ಭದ್ರತೆಯನ್ನು ಖಾತ್ರಿಪಡಿಸಲು ಸರ್ಕಾರ ಬದ್ಧʼ- ಸರಕಾರದ ಪ್ರಕಟಣೆ

- Advertisement -
- Advertisement -

ಹೊಸದಿಲ್ಲಿ: ಪಶ್ಚಿಮ ಏಷ್ಯಾ ಸಂಘರ್ಷ ಪ್ರಾರಂಭವಾದಾಗಿನಿಂದಲೂ, ನಮ್ಮ ಜನರ ಇಂಧನ ಅಗತ್ಯಗಳನ್ನು ಭದ್ರಪಡಿಸಲು ಸರ್ಕಾರ ಬದ್ಧತೆಯೊಂದಿಗೆ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತವು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಸಂಯಮ ಕಾಯ್ದುಕೊಳ್ಳಲು ಕರೆ ನೀಡಿದೆ. ಜೊತೆಗೆ ಮಾತುಕತೆ ಮತ್ತು ರಾಜತಾಂತ್ರಿಕತೆ ಮಾರ್ಗಗಳ ಮೂಲಕ ಈ ಸಂಘರ್ಷವನ್ನು ಶೀಘ್ರವಾಗಿ ಕೊನೆಗೊಳಿಸಲು ಒತ್ತಾಯಿಸಿದೆ. ಅಲ್ಲದೆ, ಭಾರತ ಮತ್ತು ಒಟ್ಟಾರೆ ಜಾಗತಿಕ ಸಮುದಾಯದ ಇಂಧನದ ಅಗತ್ಯಗಳನ್ನು ಖಾತರಿಪಡಿಸಲು ಹಾರ್ಮುಝ್ ಜಲಸಂಧಿಯ ಮೂಲಕ ಅಡೆತಡೆಯಿಲ್ಲದ, ಮುಕ್ತ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಭಾರತ ಒತ್ತಾಯಿಸುತ್ತಲೇ ಇದೆ. ವಿಶ್ವಸಂಸ್ಥೆ ಮತ್ತು ʻಅಂತಾರಾಷ್ಟ್ರೀಯ ಕಡಲ ಸಂಸ್ಥೆʼ ಸೇರಿದಂತೆ ಬಹುಪಕ್ಷೀಯ ವೇದಿಕೆಗಳಲ್ಲಿ, ವಾಣಿಜ್ಯ ಹಡಗು ಮತ್ತು ನಾವಿಕರ ಸಮುದಾಯದ ಸುರಕ್ಷತೆ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಕಡಲ ಭದ್ರತೆಯನ್ನು ಖಾತರಿಪಡಿಸುವ ಪ್ರಯತ್ನಗಳನ್ನು ಭಾರತ ಬೆಂಬಲಿಸಿದೆ. ಕೊಲ್ಲಿಯಲ್ಲಿ ನೆಲೆಸಿರುವ ಸುಮಾರು 10 ಕೋಟಿ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸುವುದು ನಮ್ಮ ದೊಡ್ಡ ಉದ್ದೇಶವಾಗಿದೆ ಎಂದು ಕೇಂದ್ರ ಸರಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜತಾಂತ್ರಿಕ ಪ್ರಯತ್ನಗಳು:

ಪ್ರಸ್ತುತ ಮುಂದುವರಿದ ಸಂಘರ್ಷದ ಬಗ್ಗೆ ನಮ್ಮ ದೃಷ್ಟಿಕೋನವನ್ನು ಮಂಡಿಸಲು ಮತ್ತು ಹಾರ್ಮುಝ್ ಜಲಸಂಧಿಯ ಮೂಲಕ ಇಂಧನ ತುಂಬಿದ ನಮ್ಮ ಹಡಗುಗಳಿಗೆ ಸುರಕ್ಷಿತ ಸಂಚಾರಕ್ಕಾಗಿ ನಾವು ಕಠಿಣ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಿದ್ದೇವೆ. ನಮ್ಮ ಪ್ರಧಾನಿ ಮುಂಚೂಣಿಯಲ್ಲಿ ನಿಂತು ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮುನ್ನಡೆಸಿದ್ದಾರೆ. ಪಶ್ಚಿಮ ಏಷ್ಯಾ/ ಕೊಲ್ಲಿ ರಾಷ್ಟ್ರಗಳಾದ ಇರಾನ್, ಯುಎಇ, ಸೌದಿ ಅರೇಬಿಯಾ, ಖತರ್, ಕುವೈತ್, ಬಹರೈನ್, ಒಮಾನ್ ಮತ್ತು ಜೋರ್ಡಾನ್ ನ ನಾಯಕರೊಂದಿಗೆ ಪ್ರಧಾನಿ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ. ಇದಲ್ಲದೆ, ಅವರು ಇಸ್ರೇಲ್, ಅಮೆರಿಕ, ಫ್ರಾನ್ಸ್, ಮಲೇಷ್ಯಾ ಮತ್ತು ನೆದರ್ಲ್ಯಾಂಡ್ಸ್ ನಾಯಕರೊಂದಿಗೆ ಸಹ ಮಾತನಾಡಿದ್ದಾರೆ. ಈ ಸಂಭಾಷಣೆಗಳ ವಿವರಗಳನ್ನು ಈ ಕೆಳಗೆ ಲಗತ್ತಿಸಲಾದ ದಾಖಲೆಯಲ್ಲಿ ಕಾಣಬಹುದು. ಅಂತೆಯೇ, ನಮ್ಮ ವಿದೇಶಾಂಗ ವ್ಯವಹಾರಗಳ ಸಚಿವರು ಪಶ್ಚಿಮ ಏಷ್ಯಾದ ತಮ್ಮ ಸಹವರ್ತಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.


ಇರಾನ್ ಮತ್ತು ಇತರ ದೇಶಗಳೊಂದಿಗಿನ ನಮ್ಮ ನಿರಂತರ ಸಂಪರ್ಕದ ಪರಿಣಾಮವಾಗಿ, ಹಾರ್ಮುಝ್ ಜಲಸಂಧಿಯ ಮೂಲಕ ಎಲ್ಪಿಜಿ ತುಂಬಿದ 8 ಭಾರತೀಯ ಹಡಗುಗಳ ಸುರಕ್ಷಿತ ಸಂಚಾರದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ಫುಜೈರಾ ಬಂದರಿನಿಂದ ಕಚ್ಚಾ ತೈಲವನ್ನು ಹೊತ್ತ 9 ನೇ ಹಡಗು (ಜಗ್ ಲಾಡ್ಕಿ) ಕೂಡ ಸುರಕ್ಷಿತವಾಗಿ ಭಾರತವನ್ನು ತಲುಪಿದೆ. ʻಜಗ್ ಲಾಡ್ಕಿʼ ಅಲ್ಲಿ ಲಂಗರು ಹಾಕಿದ್ದಾಗ ʻಯುಎಇʼನ ಬಂದರು ಡ್ರೋನ್ ದಾಳಿಗೆ ತುತ್ತಾಗಿತ್ತು. ಬಂದರುಗಳು ಸಕ್ರಿಯ ಸಂಘರ್ಷ ವಲಯದಲ್ಲಿರುವ ಕಾರಣ ಹಡಗುಗಳ ಚಲನೆಯನ್ನು ನಿರ್ವಹಿಸುವುದು ಅತ್ಯಂತ ಸೂಕ್ಷ್ಮ ಮತ್ತು ಸಂಕೀರ್ಣ ಪ್ರಕ್ರಿಯೆಯಾಗಿದೆ. ಸಂಘರ್ಷ ಪ್ರಾರಂಭವಾದಾಗ, ಭಾರತವು ಪರ್ಷಿಯನ್ ಭಾರತೀಯ ಧ್ವಜಧಾರಿ 24 ಹಡಗುಗಳು ಕೊಲ್ಲಿಯಲ್ಲಿ ಸಿಕ್ಕಿಹಾಕಿಕೊಂಡಿದ್ದವು, ಮತ್ತು ಅವು ಹಾರ್ಮುಝ್ ಜಲಸಂಧಿಯನ್ನು ದಾಟಬೇಕಾಗಿತ್ತು. ಪರ್ಷಿಯನ್ ಕೊಲ್ಲಿಯಲ್ಲಿ ಈಗ ನಮ್ಮ 16 ಹಡಗುಗಳು ಮಾತ್ರ ಉಳಿದಿವೆ. ನಮ್ಮ ಹಡಗುಗಳು ಸುರಕ್ಷಿತವಾಗಿ ಜಲಸಂಧಿಯನ್ನು ದಾಟುವುದನ್ನು ಖಚಿತಪಡಿಸಿಕೊಳ್ಳಲು ನಾವು ಇರಾನ್ ಮತ್ತು ಇತರ ಸಂಬಂಧಿತ ಪಕ್ಷಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ನಮ್ಮ ಜನರ ಇಂಧನ ಭದ್ರತೆಯ ಅಗತ್ಯಗಳನ್ನು ಪೂರೈಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ.ಭಾರತಕ್ಕೆ ಬರುತ್ತಿರುವ ಹಡಗುಗಳ ಸುರಕ್ಷತೆ

ಹರ್ಮುಜ್ ಜಲಸಂಧಿಯ ಮೂಲಕ ನಮ್ಮ ಹಡಗುಗಳ ದಾಟುವಿಕೆಯನ್ನು ನಿರ್ವಹಿಸುವುದರ ಜೊತೆಗೆ, ಹಡಗುಗಳು ಭಾರತದ ಸ್ಥಳಗಳಿಗೆ ಹೋಗುವಾಗ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುವುದನ್ನು ನಾವು ಖಚಿತಪಡಿಸಿದ್ದೇವೆ. ʻಆಪರೇಷನ್ ಸಂಕಲ್ಪ್ʼ ಭಾಗವಾಗಿ 2019ರಿಂದ ಒಮಾನ್ ಕೊಲ್ಲಿಯಲ್ಲಿ/ ಅರೇಬಿಯನ್ ಸಮುದ್ರದಲ್ಲಿರುವ ಭಾರತೀಯ ನೌಕಾಪಡೆಯ ಹಡಗುಗಳು ನಮ್ಮ ಹಡಗುಗಳಿಗೆ ಅವುಗಳ ಸಂಚಾರದ ವೇಳೆ ಬೆಂಗಾವಲು ಸೇವೆ ಒದಗಿಸಿವೆ ಎಂದು ಕೇಂದ್ರ ಸರಕಾರ ಪ್ರಕಟಣೆಯಲ್ಲಿ ತಿಳಿಸಿದೆ

- Advertisement -

Related news

error: Content is protected !!