Thursday, May 2, 2024
spot_imgspot_img
spot_imgspot_img

ವಿಟ್ಲ: ಎರುಂಬು ದೇವ ಸಾನಿಧ್ಯ ಬೆಳಗಿದರೆ ಬಾಳು ಬೆಳಗಿದಂತೆ

- Advertisement -G L Acharya panikkar
- Advertisement -

ವರದಿ:- ರಾಧಾಕೃಷ್ಣ ‘ರಾಮ್ ದೇವ್’ ವಿಟ್ಲ.

“ನಂಬಿಕೆ ಇದ್ದರೆ ಮೌನವು ಅರ್ಥವಾಗುತ್ತದೆ. ನಂಬಿಕೆ ಇಲ್ಲದಿದ್ದರೆ ಪ್ರತಿಯೊಂದರಲ್ಲೂ ಅಪಾರ್ಥ ಗೋಚರಿಸುತ್ತದೆ. ನಂಬಿಕೆ ಎಲ್ಲಾ ಸಂಬಂದ ಗಳ ಜೀವಾಳ”. ಹೀಗೆಂದು ನಂಬಿಕೆಯ ಮೇಲೆ ವಿಶ್ವಾಸವಿಟ್ಟವರು ನಾವು. ಕಲಿಯುಗದಲಿ ಹರ-ಹರಿನಾಮವೇ ಮನಸು ಬೆಳಗುವ, ಕಾಯ ಆರೋಗ್ಯವಾಗಿ ಕಾಪಿಡುವ ಉಚಿತ ಮತ್ತು ಶ್ರೇಷ್ಠ ತಪವು.

ಹಿರಿಯರು, ಪುರಾಣಗಳು ಹೇಳುತ್ತವೆ ಶ್ರಾವಣ ಭಗವಂತನ ಆರಾಧನೆಗೆ, ಅಹಿಂಸಾತ್ಮಕವಾಗಿ ಪೂಜೆ ಪುರಸ್ಕಾರಗಳಿಗೆ ಶುದ್ಧಮಾಸ ಎಂದು. ಈ ಮಾಸದ ಪ್ರತಿ ಶುಕ್ರವಾರ ಮತ್ತು ಶನಿವಾರಗಳು ದೇವಾಲಯಗಳಲ್ಲಿ ವಿಶೇಷ ವೈದಿಕ, ಧಾರ್ಮಿಕ ಕಾರ್ಯಕ್ರಮಗಳಿರುತ್ತದೆ. ಬಲಿವಾಡುಕೂಟ ಅನ್ನಸಂತರ್ಪಣೆಗೆ ವಿಶೇಷ ಪ್ರಾಧಾನ್ಯತೆ.

ಎರುಂಬು ಶ್ರೀ ವಿಷ್ಣುಮಂಗಲ ದೇವಸ್ಥಾನದಲ್ಲಿ ಈ ಮಾಸದ ಎರಡನೇ ಶನಿವಾರದ ವಿಶೇಷ ಆಚರಣೆಯು ದಿನಾಂಕ 28.8.2021ರಂದು ನಡೆಯಿತು. ವಿಷ್ಣುಮಂಗಲ ದೇವರ ಪ್ರೀತ್ಯರ್ಥವಾದ ರಂಗಪೂಜೆಯು ಊರ ಸಮಸ್ತರಿಂದ ಸೇವಾ ರೂಪವಾಗಿ ನೆರವೇರಿತು.

ಅರ್ಚಕರಾದ ಶ್ರೀ ಬಾಲಕೃಷ್ಣ ಕಾರಂತರ ಪೌರೋಹಿತ್ಯದಲ್ಲಿ ನಡೆದ ಈ ಸೇವೆಯಲ್ಲಿ, ಶ್ರೀ ವಿಷ್ಣುಮಂಗಲ ದೇವರ ವಿಶೇಷ ಅಲಂಕಾರ, ಪ್ರಕಾಶಿಸುವ ಹಣತೆಗಳ ಸಾಲುಗಳು ಆಸ್ತಿಕ ಬಂದುಗಳ, ಕಣ್ಣು,ಹೃನ್ಮನಗಳಿಗೆ ಭಗವದನುಗ್ರಹದ ಸಿಂಚನ ಮಾಡಿದಂತಾಯಿತು.

ಆ ಕ್ಷಣಗಳಂತು ಹಿರಿಯರು ಹೇಳುವಂತೆ ‘ಸ್ವರ್ಗವೇ ಧರೆಗಿಳಿದಂತೆ’ ಅನಿಸಿತ್ತು. ಶ್ರೀ ಬೊಳ್ನಾಡು ಭಗವತಿ ಭಜನಾ ಮಂಡಳಿ ಎರುಂಬು ಅವರಿಂದ ಸುಶ್ರಾವ್ಯವಾದ ನಾಮಸಂಕೀರ್ತನೆಯು ಕುಣಿತ ಭಜನೆಯೊಂದಿಗೆ ನಡೆಯಿತು. ಬಳಿಕ ಕ್ಷೇತ್ರದ ವಿಶೇಷ ಅನ್ನಸಂತರ್ಪಣಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದುದ್ದಕ್ಕೂ ಕೊರೋನ ಮಾರ್ಗಸೂಚಿಗಳನ್ನು ಪಾಲಿಸಲಾಯಿತು.

ಶ್ರೀ ವಿಷ್ಣುಮಂಗಲ ಸೇವಾ ಸಮಿತಿಯ ಸದಸ್ಯರು ಸಹಕರಿಸಿದರು. ನೀವೂ ಮುಂದಿನ ಶನಿವಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಪ್ರತ್ಯಕ್ಷ ಸಾಕ್ಷಿಗಳಾಗಬೇಕಾಗಿ ವಿನಂತಿಸುತ್ತಾ ಭಗವಂತ ನಮಗೆಲ್ಲರೀಗೂ ಆಶೀರ್ವದಿಸಲಿ.

ಮುಂದಿನ ವಾರದ ಕಾರ್ಯಕ್ರಮ ಈ ಕೇಳಗಿನಂತಿದೆ

ತಾ 04/09/2021ಸಾಯಂಕಾಲ (ಕುಣಿತ ಭಜನೆ )7:00 ಗಂಟೆಗೆ ರಂಗಪೂಜೆ, ಅನ್ನ ಸಂತರ್ಪಣೆ.

ತಾ 11/09/2021/ಬೆಳಿಗ್ಗೆ ಸತ್ಯ ನಾರಾಯಣ ಪೂಜೆ, ಶನಿಶ್ವರ ಪೂಜೆ, ಭಜನೆ, ಮಹಾಪೂಜೆ, ಅನ್ನ ಸಂತರ್ಪಣೆ.

- Advertisement -

Related news

error: Content is protected !!