




ಅಳಿಕೆ: ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಆಶ್ರಯದಲ್ಲಿ ಶ್ರೀ ವಿದ್ಯಾಗಣಪತಿ ಮಹೋತ್ಸವವು ಆ.27-08-2025ನೇ ಬುಧವಾರ 29-08-2025ನೇ ಶುಕ್ರವಾರ ಶ್ರೀ ಸತ್ಯಸಾಯಿ ಪ್ರಾರ್ಥನಾ ಮಂದಿರದಲ್ಲಿ ನಡೆಯಲಿದೆ.
ದಿನಾಂಕ:27-08-2025ನೇ ಬುಧವಾರ ಪ್ರಾತಃಕಾಲ 6-00ಕ್ಕೆ ವಿಗ್ರಹ ಪ್ರತಿಷ್ಠಾಪನೆ ನಡೆದು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರ ಅಧ್ಯಾಪಕ ಶ್ರೀ ಶ್ಯಾಮ ಕುಶಲ ಶೆಟ್ಟಿ ಪ್ರಥಮ ಆರತಿ ನೆರವೇರಿಸಲಿದ್ದಾರೆ. 7-30ರಿಂದ ಗಣಪತಿ ಹವನ ಬಳಿಕ 9-30 ರಿಂದ ಪೂಚಾರಾಧನೆ ಮತ್ತು ನಾಮಾರ್ಚನೆ, ಭಜನೆ ನಡೆದು, 12-15ಕ್ಕೆ ಮಹಾಮಂಗಳಾರತಿ, ಸಹಸ್ರಾರತಿ, ಪ್ರಸಾದ ವಿತರಣೆ ನಡೆಯಲಿದೆ. ವಿಟ್ಲ ಉದ್ಯಮಿ ಸತೀಶ್ ಆಳ್ವ ಇರಾಬಾಳಿಕೆ ಘನ ಉಪಸ್ಥಿತರಿರುವರು. ಅಪರಾಹ್ನ 2.45 ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಮೆನೇಜಿಂಗ್ ಟ್ರಿಸ್ಟಿ ಕೆ. ಎಸ್. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಕಳ ಉಪನ್ಯಾಸಕ ಕುಮಾರಿ ಅಕ್ಷಯ ಗೋಖಲೆ, ಬೆಂಗಳೂರು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಡಾ। ಭರತ್ ಹೊಳ್ಳ, Bangalore IQVIA/Johnson & Johnson IM Associate Director ಡಾ. ಮನುಶಶಾಂಕ್ ವಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಅಪರಾಹ್ನ 5-30 ರಿಂದ ನಾಮಸಂಕೀರ್ತನೆ ನಡೆಯಲಿದೆ. ಅಳಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಮಾಜಿ ಅಧ್ಯಕ್ಷ, ನಿರ್ದೇಶಕ ಕಾನ ಈಶ್ವರ ಭಟ್ ಸಂಧ್ಯಾರತಿ ನೆರವೇರಿಸಲಿದ್ದಾರೆ. ಅಪರಾಹ್ನ 6-00 ರಿಂದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ದಿನಾಂಕ: 28-08-2025ನೇ ಗುರುವಾರ ಪೂರ್ವಾಹ್ನ 5-20ರಿಂದ ಓಂಕಾರ, ಸುಪ್ರಭಾತ, ನಾಮಸಂಕೀರ್ತನೆ, ಮಂಗಳಾರತಿ ನಡೆದು 9-30 ರಿಂದ ಪೂಜಾರಾಧನೆ, ನಾಮಸಂಕೀರ್ತನೆ, ಮಂಗಳಾರತಿ ನಡೆಯಲಿದೆ. ಪೂರ್ವಾಹ್ನ 10-00 ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರ ಚಂದ್ರಶೇಖರ ಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಮೆನೇಜಿಂಗ್ ಟ್ರಸ್ಟಿ ಕೆ. ಎಸ್. ಕೃಷ್ಣ ಭಟ್ ದಿವ್ಯ ಉಪಸ್ಥಿತರಿರುವರು. Bangalore IQVIA/Johnson & Johnson IM Associate Director ಡಾ. ಮನುಶಶಾಂಕ್ ವಿ, ಬೆಂಗಳೂರು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಡಾ। ಭರತ್ ಹೊಳ್ಳ, ಪುತ್ತೂರು ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ ಭಂಡಾರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಅಪರಾಹ್ನ 2-30 ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ನಿವೃತ್ತ ಮುಖ್ಯೋಪಾಧ್ಯಾಯ, ಆಡಳಿತ ಮಂಡಳಿ ಸದಸ್ಯ ಕೆ. ಮಧುಸೂದನ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಮೆನೇಜಿಂಗ್ ಟ್ರಸ್ಟಿ ಕೆ. ಎಸ್. ಕೃಷ್ಣ ಭಟ್ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢ ಶಾಲೆ ನಿವೃತ್ತ ಮುಖ್ಯೋಪಾಧ್ಯಾಯಿನಿ ಕೆ. ವಿ. ವೆಂಕಟಲಕ್ಷ್ಮಿ ದಿವ್ಯ ಉಪಸ್ಥಿತರಿರುವರು. ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ Institute of Gastroentertiogy Sciences and Organ Transplant Director ಡಾ| ನಾಗೇಶ್, ಕಾಸರಗೋಡು Ophthalmologist, Mayya Eye Care Center, ಡಾ| ಗಣೇಶ್ ಮಯ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಅಪರಾಹ್ನ 5-30 ರಿಂದ ನಾಮಸಂಕೀರ್ತನೆ ನಡೆದು 6-00ರಿಂದ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ವೀರಮಣಿ ಕಾಳಗ-ಅಗ್ರಪೂಜೆ – ಯಕ್ಷಗಾನ ನಡೆಯಲಿದೆ. ಕಾರ್ಯದರ್ಶಿ ಮುರಳಿ ಕಡೆಕಾರ್ ಸಂಧ್ಯಾರತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಉಡುಪಿ ಯಕ್ಷಗಾನ ಕಲಾರಂಗ(ರಿ) IYC ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ದಿನಾಂಕ: 29-08-2025ನೇ ಶುಕ್ರವಾರ ಪೂರ್ವಾಹ್ನ 5:20ರಿಂದ ಓಂಕಾರ, ಸುಪ್ರಭಾತ, ನಾಮಸಂಕೀರ್ತನೆ, ಮಂಗಳಾರತಿ ನಡೆದು 6-00 ರಿಂದ ಪೂಜಾರಾಧನೆ, 8-00ರಿಂದ ನಾಮಸಂಕೀರ್ತನೆ, ಮಂಗಳಾರತಿ ನಡೆಯಲಿದೆ. 10-00 ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಳಿಕೆ ಶ್ರೀ ಸತ್ಯಸಾಯಿ ಲೋಕಾಸೇವಾ ಟ್ರಸ್ಟ್ ಮೆನೇಜಿಂಗ್ ಟ್ರಸ್ಟ್ ಕೆ.ಎಸ್. ಕೃಷ್ಣ ಭಟ್ ದಿವ್ಯ ಉಪಸ್ಥಿತರಿರುವರು. ಕರ್ನಾಟಕ ರಾಜ್ಯ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ರಾಜ್ಯಾಧ್ಯಕ್ಷ ಪದ್ಮನಾಭ ಪೈ ಎಂ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಮಹಿಳಾ ಸಂಯೋಜಕಿ ಪ್ರಿಯಾ ಪದ್ಮನಾಭ ಪೈ ಎಂ, ಬೆಂಗಳೂರು ಉದ್ಯಮಿ, ಅಳಿಕೆ ಅಳಿಕೆ ಶ್ರೀ ಸತ್ಯಸಾಯಿ ಲೋಕಾಸೇವಾ ಟ್ರಸ್ಟ್ ಟ್ರಸ್ಟಿ ಬಿ.ಆರ್ ವಾಸುಕಿ, ವಸುಧಾ ವಾಸುಕಿ ಬೆಂಗಳೂರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಪೂರ್ವಾಹ್ನ 11-00 ರಿಂದ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜು (ಹುಡುಗಿಯರ ವಿಭಾಗ) ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 2-30 ರಿಂದ ವಿದ್ಯಾಗಣಪತಿ ಶೋಭಾಯಾತ್ರೆ ಮತ್ತು ತೆಪ್ಪೋತ್ಸವ- ಜಲಸ್ತಂಭನಗೊಳ್ಳಲಿದೆ. ಅಳಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಅಧ್ಯಕ್ಷ ರೂಪೇಶ್ ರೈ, ಸಿಂಹಮೂಲೆ ಎರುಂಬು ಅಳಿಕೆ ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರ ಕಾರ್ನವರ್ ಚಂದ್ರಶೇಖರ ಮಡಿಯಾಲ, ಎರುಂಬು ಅಳಿಕೆ ಶ್ರೀ ಶಂಕರನಾರಾಯಣ ದೇವಸ್ಥಾನ ಪ್ರಧಾನ ಅರ್ಚಕರು ಬಾಲಕೃಷ್ಣ ಕಾರಂತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.









