Monday, June 22, 2026
spot_imgspot_img
spot_imgspot_img

ಮಂಗಳೂರು: ಚೂರಿ ತೋರಿಸಿ ಹಣ ಮತ್ತು ಮೊಬೈಲ್ ಸುಲಿಗೆ

- Advertisement -
- Advertisement -

ಮಂಗಳೂರು: ಚೂರಿ ತೋರಿಸಿ ಹಣ ಮತ್ತು ಮೊಬೈಲ್ ಸುಲಿಗೆ ಮಾಡಿದ ಘಟನೆ ಉರ್ವ ಸ್ಟೋರ್‌ನ ಪಿಡಬ್ಲ್ಯುಡಿ ಕ್ವಾಟ್ರಸ್‌ನ ಬಳಿ ನಡೆದಿದೆ.

ರಾತ್ರಿ 10 ಗಂಟೆಯ ಸುಮಾರಿಗೆ ಭರತ್ ಅವರು ಕೆಲಸ ಮುಗಿಸಿಕೊಂಡು ರೂಮ್‌ನ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಕ್ವಾಟ್ರಸ್‌ನ ಒಂದನೇ ಕ್ರಾಸ್ ಬಳಿ ತಲುಪಿದಾಗ ಹಿಂದಿನಿಂದ ಸ್ಕೂಟರ್‌ನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳ ಪೈಕಿ ಓರ್ವ ಚೂರಿ ತೋರಿಸಿ ಬೆದರಿಸಿ ವಿವೋ ಮೊಬೈಲ್ ಅನ್ನು ಕಸಿದುಕೊಂಡ. ಇನ್ನೋರ್ವ ಪ್ಯಾಂಟಿನ ಕಿಸೆಯಲ್ಲಿದ್ದ 500 ರೂ. ಕಸಿದುಕೊಂಡಿದ್ದಾನೆ.
ಮೂವರು ಕೂಡ ಕೈಯಿಂದ ಹೊಡೆದು ನೆಲಕ್ಕೆ ಬೀಳಿಸಿ ಚೂರಿಯಿಂದ ಬಲಗೈಗೆ ಹೊಡೆದು ಪರಾರಿಯಾಗಿದ್ದಾರೆ ಎಂದು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!