Saturday, May 4, 2024
spot_imgspot_img
spot_imgspot_img

ಜಮೀನಿನಲ್ಲಿ ವಿದ್ಯುತ್ ಸ್ಪರ್ಶಿಸಿ ರೈತ ಸಾವು..!

- Advertisement -G L Acharya panikkar
- Advertisement -

ಜಮೀನಿನಲ್ಲಿ ವಿದ್ಯುತ್ ವೈಯರ್ ತಗುಲಿ ರೈತ ಸ್ಥಳದಲ್ಲಿ ಮೃತಪಟ್ಟ ಘಟನೆ ದೇವದುರ್ಗ ತಾಲೂಕಿನ ದೇವತಗಲ್ ನಡೆದಿದೆ. ಗ್ರಾಮದಲ್ಲಿ

ಮೃತಪಟ್ಟ ರೈತ ಅಯ್ಯಪ್ಪ ನಾಯಕ (38) ಎಂದು ಗುರುತಿಸಲಾಗಿದೆ.

ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಬಿಡಲು ತೆರಳಿದ್ದಾಗ ಪಂಪ್‌ಸೆಟ್ನಿಂದ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಈ ಅನಾಹುತ ಸಂಭವಿಸಿದೆ. ರೈತ ಅಯ್ಯಪ್ಪ ನಾಯಕ ತನ್ನ ಮೂರು ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದ್ದ. ಜೆಸ್ಕಾಂ ಬೆಳಗ್ಗೆ 4 ರಿಂದ ಕೇವಲ 5 ತಾಸು ತ್ರಿಪೇಸ್ ವಿದ್ಯುತ್ ನೀಡುತ್ತಿದ್ದು, ಬೆಳೆಗ್ಗೆ ನೀರು ಕಟ್ಟಲು ಬೆಳಂಬೆಳಗ್ಗೆ ಜಮೀನಿಗೆ ತೆರಳಿದ್ದಾಗ ಘಟನೆ ನಡೆದಿದೆ. ಸ್ಥಳಕ್ಕೆ ವೈದ್ಯಾಧಿಕಾರಿ ಡಾ.ರಾಜ್‌ಕುಮಾರ ಹುಲಿಮನಿಗೌಡ, ಪಿಎಸ್‌ಐ ಬಸವರಾಜ ನಾಯಕ ಭೇಟಿನೀಡಿ ಪರಿಶೀಲಿಸಿದರು. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!