Wednesday, April 24, 2024
spot_imgspot_img
spot_imgspot_img

ಡಿಜಿಟಲ್ ತಂತ್ರಜ್ಞಾನ ಆಧಾರಿತ ಫಾಸ್ಟ್ ಟ್ಯಾಗ್ ಕಡ್ಡಾಯ.

- Advertisement -G L Acharya panikkar
- Advertisement -

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, 2021ರ ಜನವರಿ 1ರಿಂದ ಎಲ್ಲ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಿದೆ.

ಕೇಂದ್ರ ಮೋಟಾರು ವಾಹನ ಕಾಯ್ದೆ 1981ರ ತಿದ್ದುಪಡಿಯಂತೆ 2017ರ ಡಿಸೆಂಬರ್ 1ಕ್ಕೆ ಮುನ್ನ ಮಾರಾಟವಾಗಿರುವ ಎಲ್ಲಾ ‘ಎಂ’ ಮತ್ತು ‘ಎನ್’ ವರ್ಗದ ಹಳೆಯ ಮೋಟಾರು ವಾಹನ ಗಳಿಗೂ(ದ್ವಿಚಕ್ರ ವಾಹನಗಳಿಗೆ) ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ. ಈ ಕುರಿತಂತೆ ಸಚಿವಾಲಯ 2020ರ ನವೆಂಬರ್ 6ರಂದು ಜಿಎಸ್‌ಆರ್ 690(ಇ) ಅಧಿಸೂಚನೆಯನ್ನು ಹೊರಡಿಸಿತ್ತು.


ಕೇಂದ್ರೀಯ ಮೋಟಾರು ವಾಹನ ನಿಯಮ 1989ರ ಅನ್ವಯ 2017ರ ಡಿಸೆಂಬರ್ 1 ರ ನಂತರ ನೋಂದಾಯಿಸಲ್ಪಟ್ಟಿರುವ ಎಲ್ಲಾ ಹೊಸ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಗೊಳಿಸಲಾಗಿದ್ದು, ಅವುಗಳನ್ನು ವಾಹನ ಉತ್ಪಾದಕರು ಅಥವಾ ಡೀಲರ್ ಗಳು ಪೂರೈಸಬೇಕಾಗಿದೆ.

ಸಾರಿಗೆ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆಯ ನಂತರವೇ ಅವುಗಳ ಕ್ಷಮತಾ ಪ್ರಮಾಣಪತ್ರ(ಫಿಟ್ ನೆಸ್ ಸರ್ಟಿಫಿಕೇಟ್) ಅನ್ನು ನವೀಕರಣ ಮಾಡಿಕೊಡಬೇಕು ಎಂದು ಕಡ್ಡಾಯ ಗೊಳಿಸಲಾಗಿದೆ. ಜೊತೆಗೆ 2019ರ ಅಕ್ಟೋಬರ್ 1ರಿಂದೀಚೆಗೆ ರಾಷ್ಟ್ರೀಯ ಪರ್ಮಿಟ್ ಹೊಂದಿರುವ ಎಲ್ಲ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.

- Advertisement -

Related news

error: Content is protected !!