Saturday, May 4, 2024
spot_imgspot_img
spot_imgspot_img

ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಪತ್ನಿ; ಡೆತ್‌ನೋಟ್‌ ಬರೆದು ವಾಟ್ಸಾಪ್‌ ಸ್ಟೇಟಸ್‌ ಹಾಕಿದ ಮಹಿಳೆ

- Advertisement -G L Acharya panikkar
- Advertisement -
vtv vitla

ಪತಿ ಹಾಗೂ ಆತನ ಪ್ರೇಯಸಿಯ ವಿರುದ್ಧ ಡೆತ್ ನೋಟ್ ಬರೆದಿಟ್ಟು ಅದನ್ನು ವಾಟ್ಸಾಪ್‌ ಸ್ಟೇಟಸ್‌ ಹಾಕಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಂಗಳೂರಿನ ಹೆಗ್ಗನಹಳ್ಳಿ‌ ನಿವಾಸಿ ಪವಿತ್ರಾ ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ.

ಮೊದಲ ಪತಿಗೆ ವಿಚ್ಛೇದನ ನೀಡಿ ಚೇತನ್ ಗೌಡ ಎಂಬಾತನನ್ನು ಪವಿತ್ರಾ ಎರಡನೇ ಮದುವೆಯಾಗಿದ್ದರು. ಚೇತನ್‌ ಗೌಡ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯಲ್ಲಿ ಪವಿತ್ರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಮತ್ತೊಬ್ಬ ಯುವತಿಯ ವಿಚಾರವಾಗಿ ಪತಿ ಪತ್ನಿ ಮಧ್ಯೆ ಜಗಳವಾಗುತ್ತಿತ್ತು. ಈ ಬಗ್ಗೆ ತಮ್ಮ ತಾಯಿ ಪದ್ಮಮ್ಮ ಬಳಿ ಪವಿತ್ರ ತಿಳಿಸಿದ್ದರು. ಕೊನೆಗೆ ಮನನೊಂದು ಡೆತ್ ನೋಟ್ ಬರೆದು ಅದನ್ನು ವಾಟ್ಸ್ಯಾಪ್ ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿದ್ದಾರೆ.

ಡೆತ್‌ನೋಟ್‌ನಲ್ಲಿ ಏನಿದೆ..?

ನನ್ನ ಸಾವಿಗೆ ಗಂಡನಾದ ಚೇತನ್ ಗೌಡ ಹಾಗೂ ಪೂಜಾ ಗೌಡ ಕಾರಣರಾಗಿರುತ್ತಾರೆ. 2019ರ ಮೇ 26ರಲ್ಲಿ ಚೇತನ್ ಗೌಡ ಜೊತೆ ಮದುವೆ ಆಗಿದ್ದೇನೆ. ಬಳಿಕ ಚೇತನ್ ಗೌಡ, ಪೂಜಾ ಗೌಡ ಎಂಬ ಯುವತಿಯ ಜೊತೆ ಅಕ್ರಮ ಸಂಬಂದ ಇಟ್ಟುಕೊಂಡಿರುತ್ತಾನೆ. ಅಕ್ರಮ ಸಂಬಂದ ಇಟ್ಟುಕೊಂಡ ಬಳಿಕ ನನಗೆ ಸಾಕಷ್ಟು ಕಿರುಳುಕುಳ ಕೊಟ್ಟಿದ್ದು ಸಾಕಷ್ಟು ಕಷ್ಟ ಅನುಭವಿಸಿದ್ದೇನೆ.

ನನ್ನ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗಬೇಕು. ನನಗೆ ನ್ಯಾಯ ಸಿಗಬೇಕು. ಚೇತನ್ ಗೌಡನಿಗಾಗಿ ನನ್ನ ಅರ್ಧ ಜೀವನ ಮುಡುಪಾಗಿಟ್ಟಿದ್ದೆ. ಆದರೆ ಪೂಜಾ ಗೌಡ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ನನಗೆ ಚಿತ್ರಹಿಂಸೆ ಕೊಟ್ಟು ನನ್ನ ಸಾವಿಗೆ ಕಾರಣರಾಗಿದ್ದಾರೆ. ಹೀಗಾಗಿ ಪೂಜಾ ಗೌಡ ಹಾಗೂ ಚೇತನ್ ಗೌಡಗೆ ಶಿಕ್ಷೆಯಾಗಲೇ ಬೇಕು ಎಂದು ಪವಿತ್ರಾ ಡೆತ್‍ನೋಟ್‍ನಲ್ಲಿ ಒತ್ತಾಯಿಸಿದ್ದಾರೆ.

ಮಗಳ ವಾಟ್ಸ್ಯಾಪ್ ಸ್ಟೇಟಸ್‌ನಲ್ಲಿ ಡೆತ್ ನೋಟ್ ನೋಡಿ ಗಾಬರಿಯಾದ ತಾಯಿ ಮಗಳ ಮನೆ ಬಳಿ ಬಂದಾಗ ಪವಿತ್ರಾ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

ಸದ್ಯ ಕೆಂಗೇರಿ ಠಾಣೆಯಲ್ಲಿ ಚೇತನ್ ಗೌಡ ಹಾಗೂ ಮತ್ತೊಬ್ಬ ಯುವತಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೃತರ ತಾಯಿ ಪದ್ಮಮ್ಮರ ದೂರಿನನ್ವಯ ಐಪಿಸಿ 306- ಆತ್ಮಹತ್ಯೆ ಪ್ರಚೋದನೆ ಅಡಿ ದೂರು ದಾಖಲಿಸಲಾಗಿದೆ. ಮೃತರ ಡೆತ್ ನೋಟ್ ಹಾಗೂ ಎರಡು ಪೋನ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!