Saturday, April 20, 2024
spot_imgspot_img
spot_imgspot_img

ಪ್ರಥಮ ವಾರ್ಷಿಕೋತ್ಸವದ ಸಂಭ್ರಮದಲ್ಲಿ ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ!!

- Advertisement -G L Acharya panikkar
- Advertisement -

ಪುತ್ತೂರು: ಇಂದಿಗೆ ನಮ್ಮ ಹೆಮ್ಮೆಯ ದ ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಉದ್ಘಾಟನೆಗೊಂಡು 1 ವರುಷಗಳು ಪೂರ್ತಿಗೊಂಡಿದೆ. ಈ 1 ವರುಷದಲ್ಲಿ ನಮ್ಮ ಸಂಘಟನೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿ ಎಲ್ಲರಲ್ಲೂ ಮೆಚ್ಚುಗೆಯನ್ನು ಪಡೆದುಕೊಂಡಿರುತ್ತದೆ.


ಮರಾಟಿ ಸಂವಾದ ,ಮರಾಟಿ ಉದ್ಯೋಗ,ಮರಾಟಿ ವಧುವರರ ವೇದಿಕೆ,ಮರಾಟಿ ನೆರವು,ಮರಾಟಿ ರಕ್ತನಿಧಿ,ಸ್ವಚ್ಚತಾ ಕಾರ್ಯ ಕ್ರಮ
ಮನೆಬೇಟಿ ಹಲವು ಕಾರ್ಯ ಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿರುತ್ತೇವೆ.

ಒಬ್ಬ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಕೂಡ ನಮ್ಮ ಸೇವೆ ತಲುಪಿದೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ.ಇದೆಲ್ಲಾ ಸಾಧ್ಯವಾಗಿದ್ದು ನಮ್ಮ ಸಮಿತಿಯ ಸಮಾನ ಮನಸ್ಕ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರ ಒಗ್ಗಟ್ಟಿನ ಬಲ ಮತ್ತು ಕೆಲಸದಿಂದ ಅಂತ ಹೇಳಲು ಇಚ್ಚೆಪಡುತ್ತೇನೆ. ಹೆಚ್ಚಿನ ಸಮಸ್ಯೆಗಳಿಗೆ ಅತ್ಯಂತ ಕಡಿಮೆ ಸಮಯದಲ್ಲಿ ನ್ಯಾಯ ದೊರಕಿಸಿ ಕೊಟ್ಟಿದ್ದೇವೆ.ನಮ್ಮ ಸಂಘಟನೆಯ ಕೆಲಸಗಳನ್ನು ಕಂಡು ಇನ್ನಿತರ ಸಂಘ ಸಂಸ್ಥೆಗಳು ಕೂಡ ನಮ್ಮ ಬೆನ್ನು ತಟ್ಟಿವೆ.ನಮ್ಮ ಉದ್ದೇಶ ಇಷ್ಟೇ “ಯಾರಿಗಾದರೂ ನೊಂದವರಿಗೆ ನ್ಯಾಯ ಒದಗಿಸುವುದು”ಈ ನಿಟ್ಟಿನಲ್ಲಿ ನಾವು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವೆ.ಇದಕ್ಕೆಲ್ಲ ನಮ್ಮ ಹೆಮ್ಮೆಯ ಸದಸ್ಯರ ಬೆಂಬಲ ಸದಾ ಇರಬೇಕಾಗಿದೆ.ಅದಕ್ಕೆ ನೀವೆಲ್ಲ ಬದ್ಧರಾಗಿದ್ದೀರಿ ಎಂದು ನಂಬಿದ್ದೇನೆ.ಹಾಗೂ ಅದಕ್ಕೆಲ್ಲ ದೇವರು ನಿಮಗೆ ಹೆಚ್ಚಿನ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.
ಹಾಗೂ ಈ 1 ವರುಷ ಸಂಘಟನೆಯ ಎಲ್ಲಾ ಕಾರ್ಯ ಚಟುವಟಿಕೆಯಲ್ಲಿ ತಮ್ಮ ಅಮೂಲ್ಯವಾದ ಸಮಯವನ್ನು ಮೀಸಲಿಟ್ಟು ರಾತ್ರಿ ಹಗಲೆನ್ನದೆ ದುಡಿದ ಎಲ್ಲಾ ಪದಾಧಿಕಾರಿಗಳಿಗೂ ಸದಸ್ಯರಿಗೂ ಹಾಗೂ ಪ್ರತ್ಯಕ್ಸವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಈ ಸಂಧರ್ಭದಲ್ಲಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ??????
ಅಶೋಕ್ ನಾಯ್ಕ ಕೆದಿಲ
ಅಧ್ಯಕ್ಷರು,
ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ (ರಿ).ಮಂಗಳೂರು.

- Advertisement -

Related news

error: Content is protected !!