- Advertisement -
- Advertisement -


ಬಾಗಲಕೋಟೆ: ಮೀನು ಹಿಡಿಯಲು ಹೋದ ಮೀನುಗಾರ ಬಲೆ ಕಾಲಿಗೆ ಸಿಲುಕಿ ಕೃಷ್ಣಾ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಕುಲಹಳ್ಳಿ ಗ್ರಾಮದ ಬಾವುಸಾಬ ಬಾಗಡೆ (42) ಎಂದು ಗುರುತಿಸಲಾಗಿದೆ.
ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ ಬಾವು ಸಾಬ ಎಂದಿನಂತೆ ಶುಕ್ರವಾರ ಬೆಳಗ್ಗೆ ಸಮೀಪದ ಮಹಿಷವಾಡಗಿ ಸೇತುವೆ ಬಳಿ ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಹಿಂದಿನ ದಿನ ಬಲೆ ಹಾಕಿ ಮರುದಿನ ತೆಗೆಯುವ ವೇಳೆ ಕಾಲಿಗೆ ಸಿಲುಕಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನ ಎಂದು ತಿಳಿದು ಬಂದಿದೆ.
ಈಜುಗಾರರ ತಂಡ ಹಾಗೂ ಅಗ್ನಿ ಶಾಮಕದಳದ ಸಹಾಯದಿಂದ ಶವಕ್ಕಾಗಿ ಶೋಧ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ , ಸಿಪಿಐ ಸಂಜೀವ ಬಳಗಾರ, ಪಿಎಐ ಶಾಂತಾ ಹಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
- Advertisement -








