Saturday, May 4, 2024
spot_imgspot_img
spot_imgspot_img

ಈರುಳ್ಳಿ ಮೊಳಕೆ ಬಾರದಂತಿರಲು ಪಾಲಿಸಿ ಈ ಸಲಹೆ

- Advertisement -G L Acharya panikkar
- Advertisement -

ಸಾಮಾನ್ಯವಾಗಿ ಜನರು ಈರುಳ್ಳಿಯನ್ನು ಆಲೂಗಡ್ಡೆ, ಬೆಳ್ಳುಳ್ಳಿ, ಶುಂಠಿ ಮುಂತಾದ ತರಕಾರಿಗಳ ಒಟ್ಟಿಗೆ ಇಡುತ್ತಾರೆ. ಇವುಗಳು ಎಥಿಲೀನ್ ಎಂಬ ರಾಸಾಯನಿಕ ಹೊಂದಿದ್ದು, ಇವು ಈರುಳ್ಳಿ ಮೊಳೆಯೊಡೆಯಲು ಕಾರಣವಾಗುತ್ತವೆ. ಹಾಗಾಗಿ ಇತರ ತರಕಾರಿಗಳೊಂದಿಗೆ ಮಿಕ್ಸ್ ಮಾಡಿ ಇಡಬೇಡಿ.

ಬೇಸಿಗೆಯ ತಿಂಗಳುಗಳಲ್ಲಿ ಬೆಚ್ಚಗಿನ ತಾಪಮಾನ ಮತ್ತು ಹೆಚ್ಚಿದ ಆರ್ದ್ರತೆಯ ಮಟ್ಟಗಳಿಂದ ಈರುಳ್ಳಿ ಹೆಚ್ಚಾಗಿ ಮೊಳಕೆಯೊಡೆಯುತ್ತದೆ. ತಾಪಮಾನವು ಹೆಚ್ಚಾದಂತೆ, ಈರುಳ್ಳಿ ಬಲ್ಬ್‌ನ ಸಂಗ್ರಹವಾಗಿರುವ ಶಕ್ತಿಯು ಹೆಚ್ಚು ವೇಗವಾಗಿ ಬಳಸಲ್ಪಡುತ್ತದೆ.

ಇದರಿಂದಾಗಿ ಈರುಳ್ಳಿ ಮೊಳಕೆಯೊಡೆಯಲು ಪ್ರಾರಂಭಿಸುತ್ತದೆ. ಶಾಖ ಮತ್ತು ತೇವಾಂಶವು ಅಚ್ಚು ಮತ್ತು ಬ್ಯಾಕ್ಟೀರಿಯಾವನ್ನು ಬೆಳೆಯಲು ಸೂಕ್ತವಾದ ವಾತಾವರಣವನ್ನು ಸೃಷ್ಟಿಸುತ್ತದೆ, ಇದು ಮೊಳಕೆಯ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸುತ್ತದೆ.

ಈರುಳ್ಳಿಯನ್ನು ಕಾಗದ ಅಥವಾ ಕವರ್ ನಲ್ಲಿ ಸುತ್ತಿ ತಂಪಾದ,ಚೆನ್ನಾಗಿ ಗಾಳಿ ಇರುವ ಪ್ರದೇಶದಲ್ಲಿ ಸಂಗ್ರಹಿಸಿ ಇಡಿ. ಇದರಿಂದ ಅದು ಬೇಗನೆ ಮೊಳೆಯೊಡೆಯುವುದಿಲ್ಲ.
ಅನೇಕ ಜನರು ಈರುಳ್ಳಿಯನ್ನು ಫ್ರಿಜ್ ನಲ್ಲಿ ಸ್ಟೋರ್ ಮಾಡಿ ಇಡುತ್ತಾರೆ. ಹೀಗೆ ಮಾಡಬೇಡಿ. ಯಾಕೆಂದರೆ ಫ್ರಿಜ್ ನಲ್ಲಿಟ್ಟ ಈರುಳ್ಳಿ ಬೇಗ ಮೊಳಕೆಯೊಡೆಯುತ್ತದೆ.
ಪ್ಲಾಸ್ಟಿಕ್ ಚೀಲದಲ್ಲಿ ಈರುಳ್ಳಿಯನ್ನು ಸಂಗ್ರಹಿಸಿಡಬೇಡಿ. ಇದರಿಂದ ಈರುಳ್ಳಿ ಬೇಗ ಬಿಸಿಯಾಗಿ ಮೊಳೆಯೊಡೆಯುತ್ತದೆ. ಹಾಗಾಗಿ ಈರುಳ್ಳಿಯನ್ನು ಸುತ್ತಿ ಇಡಲು ಹತ್ತಿ ಬಟ್ಟೆ ಬಳಸಿ.

- Advertisement -

Related news

error: Content is protected !!