- Advertisement -
- Advertisement -


ಧಾರವಾಡ: ಮಾಜಿ ಕಾರ್ಪೊರೇಟರ್ ಓರ್ವ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿ, ಜೀವ ಬೆದರಿಕೆ ಹಾಕಿದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಮೂರನೇ ವಾರ್ಡ್ ನ ಮಾಜಿ ಕಾರ್ಪೋರೆಟರ್, ಜೆಡಿಎಸ್ ಮುಖಂಡ ಶ್ರೀಕಾಂತ್ ಜಮನಾಳ, ಮಹಿಳೆಯನ್ನು ನಡುರಸ್ತೆಯಲ್ಲಿಯೇ ಕೈ ಹಿಡಿದು ಎಳೆದಾಡಿ ಗಲಾಟೆ ಮಾಡಿದ್ದಾನೆ. ಹೌದು. ನಗರದ ಸತ್ತೂರ ಡೆಂಟಲ್ ಕಾಲೇಜು ಬಳಿ ಮಹಿಳೆ ಜೊತೆಗೆ ಅಸಭ್ಯವಾಗಿ ವರ್ತಿಸಿರುವ ಜಮನಾಳ, ಮಹಿಳೆಯೊಂದಿಗೆ ಹಣದ ವ್ಯವಹಾರ ಇಟ್ಟುಕೊಂಡಿದ್ದ ಎನ್ನಲಾಗಿದ್ದು,
ಅನೈತಿಕ ಚಟುವಟಿಕೆಗೆ ಬಳಸಿಕೊಳ್ಳಲು ಒತ್ತಾಯ ಮಾಡಿದ್ದಾನೆ. ಅಲ್ಲದೇ ಮಹಿಳೆಯ ಮನೆಗೆ ಹೋದಾಗ ಬಾಗಿಲು ತೆರೆಯದೇ ಹಿಂದೇಟು ಹಾಕಿದ್ದಾಳೆ. ಮಹಿಳೆ ಬಾಗಿಲು ತೆರೆಯದ್ದಕ್ಕೆ ಕೋಪಗೊಂಡ ಜಮನಾಳ ಬಾಗಿಲು ಮುರಿದು ಮನೆಯೊಳಗೆ ನುಗ್ಗಿ ಗಲಾಟೆ ಮಾಡಿದ್ದಲ್ಲದೇ, ಮಹಿಳೆಯ ಮೇಲೆ ಹಲ್ಲೆಗೈದಿದ್ದಾನೆ. ಇದರಿಂದ ಆತಂಕಗೊಂಡಿರುವ ಮಹಿಳೆ ಜೀವ ಬೆದರಿಕೆಯಿಂದಾಗಿ ಜಮನಾಳ ವಿರುದ್ಧ ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.



- Advertisement -








