Wednesday, August 12, 2026
spot_imgspot_img
spot_imgspot_img

ಪತ್ನಿಗೆ ಗುಂಡಿಕ್ಕಿ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ವರ್ಜೀನಿಯಾ ಮಾಜಿ ಗವರ್ನರ್‌

- Advertisement -
- Advertisement -

ವಾಷಿಂಗ್ಟನ್‌: ವಿಚ್ಛೇದನ ಪ್ರಕರಣದ ವಿಚಾರವಾಗಿ ವರ್ಜೀನಿಯಾ ಮಾಜಿ ಗವರ್ನರ್‌ವೊಬ್ಬರು ಪತ್ನಿಯನ್ನು ಗುಂಡಿಕ್ಕಿ ಕೊಂದು, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ವರ್ಜೀನಿಯಾದ ಮಾಜಿ ಲೆಫ್ಟಿನೆಂಟ್ ಗವರ್ನರ್ ಜಸ್ಟಿನ್ ಫೇರ್‌ಫ್ಯಾಕ್ಸ್, ಡೆಮಾಕ್ರಟಿಕ್ ಪಕ್ಷದಲ್ಲಿ ಉದಯೋನ್ಮುಖ ತಾರೆಯಾಗಿದ್ದರು. ಆದರೆ, ಲೈಂಗಿಕ ದೌರ್ಜನ್ಯದ ಆರೋಪಗಳು ಅವರ ರಾಜಕೀಯ ಭವಿಷ್ಯವನ್ನು ಹಾಳುಮಾಡಿತು. ಗಂಭೀರ ಆರೋಪಗಳನ್ನು ಹೊತ್ತ ಫೇರ್‌ಫ್ಯಾಕ್ಸ್‌ರನ್ನು ಮನೆಯಿಂದ ಹೊರಹಾಕಲಾಯಿತು. ಈ ಘಟನೆಗಳ ಬಳಿಕ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಫೇರ್‌ಫ್ಯಾಕ್ಸ್ (47) ಮತ್ತು ಅವರ ಪತ್ನಿ ಡಾ. ಸೆರಿನಾ ಫೇರ್‌ಫ್ಯಾಕ್ಸ್ (49) ಅವರ ಶವಗಳು ಮನೆಯಲ್ಲಿ ಪತ್ತೆಯಾಗಿವೆ ಎಂದು ಫೇರ್‌ಫ್ಯಾಕ್ಸ್ ಕೌಂಟಿ ಪೊಲೀಸ್ ಮುಖ್ಯಸ್ಥ ಕೆವಿನ್ ಡೇವಿಸ್ ತಿಳಿಸಿದ್ದಾರೆ. ಜಸ್ಟಿನ್ ಫೇರ್‌ಫ್ಯಾಕ್ಸ್ ಯಶಸ್ವಿ ದಂತವೈದ್ಯೆಯಾಗಿದ್ದ ತನ್ನ ಪತ್ನಿಯನ್ನು ನೆಲಮಾಳಿಗೆಯಲ್ಲಿ ಗುಂಡು ಹಾರಿಸಿ ಕೊಂದಿದ್ದಾರೆ. ನಂತರ ಮೇಲಿನ ಮಹಡಿಯ ಮಲಗುವ ಕೋಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!