Tuesday, May 7, 2024
spot_imgspot_img
spot_imgspot_img

ವಿಟ್ಲ: (ಜು.23) ಉಚಿತ ಯೋಗ ಶಿಕ್ಷಣ ತರಬೇತಿ ಪ್ರಾರಂಭ

- Advertisement -G L Acharya panikkar
- Advertisement -

ವಿಟ್ಲ: ಎಸ್‌ಪಿವೈಎಸ್‌ಎಸ್ ಕರ್ನಾಟಕ ನೇತ್ರಾವತಿ ವಲಯ, ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸಹಯೋಗದೊಂದಿಗೆ ಉಚಿತ ಯೋಗ ಶಿಕ್ಷಣ ತರಗತಿ ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜು.23ರಂದು ಉದ್ಘಾಟನೆಗೊಳ್ಳಲಿದೆ. ಯೋಗ ಶಿಕ್ಷಣ ತರಗತಿಯು 48 ದಿನಗಳ ಕಾಲ ಬೆಳಿಗ್ಗೆ 6 ಗಂಟೆಯಿಂದ 7 ಗಂಟೆಯವರೆಗೆ ನಡೆಯಲಿದೆ.

ಮಧುಮೇಹ, ರಕ್ತದೊತ್ತಡ, ಬೊಜ್ಜಿನ ಸಮಸ್ಯೆ, ಮೂಲವ್ಯಾಧಿ, ಆಸಿಡಿಟಿ, ಅಜೀರ್ಣ, ಸಂಧಿವಾತ, ನಿದ್ರಾಹೀನತೆ, ವಾತರೋಗ, ಮಾನಸಿಕ ಒತ್ತಡ, ಮಂಡಿನೋವು ಮತ್ತು ಬೆನ್ನುನೋವು ಇವುಗಳಿಗೆ ಸೂಕ್ತ ಚಿಕಿತ್ಸಾಕ್ರಮವನ್ನು ಯೋಗದ ಮೂಲಕ ನೀಡಿ ಗರಿಷ್ಟ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಕೇಂದ್ರ ಸಮಿತಿಯಿಂದ ತರಬೇತಿ ಪಡೆದ ಶಿಕ್ಷಕರಿಂದ ತರಗತಿಗಳನ್ನು ನಡೆಸಲಾಗುವುದು. 10ರಿಂದ ಮೇಲ್ಪಟ್ಟ ಎಲ್ಲಾ ವಯಸ್ಸಿನವರು ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ 8762475337, 7353917866, 9845207443ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!