Tuesday, June 23, 2026
spot_imgspot_img
spot_imgspot_img

ಮಾರಕ ಕೊರೊನಾಗೆ ಗಾಂಧೀಜಿ ಮರಿ ಮೊಮ್ಮಗ ಬಲಿ!!

- Advertisement -
- Advertisement -

ಜೋಹಾನ್ಸ್ ಬರ್ಗ್: ಮಾರಕ ಕೊರೋನಾ ಮಹಾತ್ಮ ಗಾಂಧೀಜಿ ಅವರ ಮರಿ ಮೊಮ್ಮಗನನ್ನು ಬಲಿಪಡೆದುಕೊಂಡಿದೆ. ಗಾಂಧೀಜಿ ಅವರ ಮರಿ ಮೊಮ್ಮಗ ಸತೀಶ್ ದುಪೋಲಿಯಾ ಕೊರೋನಾದಿಂದ ಮೃತಪಟ್ಟಿದ್ದಾರೆ.

ಅವರಿಗೆ 66 ವರ್ಷ ಪ್ರಾಯವಾಗಿತ್ತು. ಸತೀಶ್ ದುಪೋಲಿಯಾ ಅವರ ಸಹೋದರಿ ಉಮಾ ಅವರು ತಮ್ಮ ಸಹೋದರ ಮೃತಪಟ್ಟಿರುವುದನ್ನು ಖಚಿತ ಪಡಿಸಿದ್ದಾರೆ.ಕಳೆದ ಕೆಲವು ತಿಂಗಳಿನಿಂದ ನನ್ನ ಸಹೋದರ ಸತೀಶ್ ಅವರು ಅಸ್ವಸ್ಥರಾಗಿದ್ದರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಕೊರೋನಾ ಸೋಂಕು ತಗುಲಿತ್ತು. ಇದೀಗ ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಉಮಾ ಸಾಮಾಜಿಕ ಜಾಲ ತಾಣದಲ್ಲಿ ಬಹಿರಂಗಪಡಿಸಿದ್ದಾರೆ.

ಜೋಹಾನ್ಸ್ ಬರ್ಗ್ ನಲ್ಲಿ ಗಾಂಧಿ ಸಂದೇಶ ಮತ್ತು ಸಂಬಂಧಿತ ಚಟುವಟಿಕೆಯಲ್ಲಿ ಉಮಾ ಅವರು ತೊಡಗಿಸಿಕೊಂಡಿದ್ದಾರೆ. ಸತೀಶ್ ದುಪೋಲಿಯಾ ಅವರ ಸಹೋದರಿ ಕೀರ್ತಿ ಮೆನೋನ್ ಕೂಡ ಜೋಹಾನ್ಸ್ ಬರ್ಗ್ ನಲ್ಲಿ ವಾಸಿಸುತ್ತಿದ್ದಾರೆ.

- Advertisement -

Related news

error: Content is protected !!